alex Certify ಲೈಂಗಿಕ ಬದುಕು ನಾಲ್ಕೈದು ವರ್ಷಗಳಲ್ಲೇ ಮಂಕಾಗಿದೆಯಾ….? ಇದಕ್ಕೆ ಕಾರಣ ಈ ಹವ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ಬದುಕು ನಾಲ್ಕೈದು ವರ್ಷಗಳಲ್ಲೇ ಮಂಕಾಗಿದೆಯಾ….? ಇದಕ್ಕೆ ಕಾರಣ ಈ ಹವ್ಯಾಸ

ಮದ್ವೆಯಾಗಿ ನಾಲ್ಕೈದು ವರ್ಷಗಳಲ್ಲಿ ಲೈಂಗಿಕ ಬದುಕು ಮಂಕಾಗಿದೆ ಅನ್ನೋ ಭಾವನೆ ಎಷ್ಟೋ ಜನರಲ್ಲಿ ಮೂಡೋದು ಸಹಜ. ಇದಕ್ಕೆ ಕಾರಣ ನಿಮ್ಮ ನಿತ್ಯದ ಜೀವನದ ಕೆಲವೊಂದು ನಿರುಪದ್ರವಿ ಹವ್ಯಾಸಗಳು.

ಕಚೇರಿ ಕೆಲಸವನ್ನು ಮನೆಗೆ ತರೋದು ಕೂಡ ಒಂದು ಕಾರಣ. ಆಗ ಲ್ಯಾಪ್ ಟಾಪ್ ಬೆಡ್ ರೂಮಿಗೂ ಎಂಟ್ರಿಯಾಗುತ್ತೆ. ಹಾಸಿಗೆ ಮೇಲೆ ಸಂಗಾತಿ ಜೊತೆ ಸಮಯ ಕಳೆಯೋದು ಬಿಟ್ಟು ಕೆಲಸದಲ್ಲಿ ಬ್ಯುಸಿಯಾಗುತ್ತೀರಾ.

ಮಲಗುವ ವೇಳೆ ಸಮಸ್ಯೆಗಳ ಬಗ್ಗೆ ಚರ್ಚಿಸೋದು. ಅಂದ್ರೆ ಪರಸ್ಪರರನ್ನು ದೂರುವುದು ಇರಬಹುದು. ಇಲ್ಲವೇ ಹಣದ ಸಮಸ್ಯೆ, ಸಹೋದ್ಯೋಗಿಗಳ ಬಗ್ಗೆ ದೂರು, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅದು ಸೂಕ್ತ ಸಮಯವಲ್ಲ.

ಮಲಗುವ ವೇಳೆ ಏನನ್ನಾದ್ರೂ ತಿಂದು, ಹಾಲ್ ಅಥವಾ ರೂಮಿನಲ್ಲಿ ಅದರ ಅವಶೇಷಗಳನ್ನು ಚೆಲ್ಲುವುದು ಕೂಡ ನಿಮ್ಮ ಲೈಂಗಿಕ ಬದುಕು ಮಂಕಾಗಲು ಒಂದು ಕಾರಣ.

ಸಾಮಾಜಿಕ ತಾಣಗಳ ಬಗ್ಗೆ ಅತಿಯಾದ ಆಸಕ್ತಿ ಹೊಂದೋದು ಉತ್ತಮ ಬೆಳವಣಿಗೆಯಲ್ಲ. ಫ್ರೀ ಟೈಮ್ ನಲ್ಲೆಲ್ಲ ಮೊಬೈಲ್ ನೋಡುತ್ತ ಕೂರಬೇಡಿ. ಪರಸ್ಪರರ ಜೊತೆಗೆ ಸಮಯ ಕಳೆಯಿರಿ.

ನಿಮ್ಮ ಮುದ್ದಿನ ನಾಯಿ ಅಥವಾ ಸಾಕು ಪ್ರಾಣಿಗೆ ಹಾಸಿಗೆ ಏರಲು ಅವಕಾಶ ಕೊಡಬೇಡಿ. ವಾರದ ಹಿಂದಿನ ಜಗಳ ಇತ್ಯರ್ಥಕ್ಕೆ ಹಾಸಿಗೆಯನ್ನು ಬಳಸಿಕೊಳ್ಳಬೇಡಿ. ಪ್ರತಿನಿತ್ಯ ಮದ್ಯ ಸೇವನೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆ ಕೂಡ ನಿಮ್ಮ ಲೈಂಗಿಕ ಬದುಕಿಗೆ ಅಡ್ಡಿಯಾಗಬಲ್ಲದು.

ತುಂಬಾ ತಡವಾಗಿ, ಅತಿಯಾಗಿ ತಿನ್ನಬೇಡಿ. ಇದರಿಂದ ನಿಮಗೆ ಬಹುಬೇಗ ನಿದ್ದೆ ಆವರಿಸುತ್ತದೆ. ಊಟ ಮಾಡಿದ ಬಳಿಕ ಬಾಯಿಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ನಿಮ್ಮ ದೇಹ ಕೂಡ ಸುಗಂಧಭರಿತವಾಗಿರಲಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...