ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ತೆಂಗಿನೆಣ್ಣೆ ಹಾಗೂ ರೋಸ್ ವಾಟರ್ ಮಿಶ್ರಣವನ್ನು ತ್ವಚೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಒಣ ತ್ವಚೆ ಸಮಸ್ಯೆ ಬಹು ಬೇಗ ದೂರವಾಗುತ್ತದೆ. ಇದಕ್ಕೆ ಆಲಿವ್ ಆಯಿಲ್ ಬೆರೆಸಿ ಬಳಸಿದರೂ ಅತ್ಯುತ್ತಮ ಲಾಭ ಪಡೆದುಕೊಳ್ಳಬಹುದು.
ಜೇನು ತುಪ್ಪ ಮತ್ತು ಗ್ಲಿಸರಿನ್ ಬೆರೆಸಿ ಹಚ್ಚಿಕೊಂಡರೆ ಚರ್ಮದ ಮೇಲ್ಭಾಗ ಒಣಗುವುದು ಕಡಿಮೆಯಾಗುತ್ತದೆ. ತಾಜಾ ಅಲೋವೇರಾದ ರಸ ತೆಗೆದು ಹಚ್ಚುವುದರಿಂದ ಒಣತ್ವಚೆಯಿಂದ ಉಂಟಾಗುವ ತುರಿಕೆ ಕಡಿಮೆಯಾಗುತ್ತದೆ.
ಎಳ್ಳೆಣ್ಣೆಯನ್ನು ಮೈ ಕೈ ಕಾಲಿಗೆ ಹಚ್ಚುವುದರಿಂದ ಒಣತ್ವಚೆಯಿಂದ ಏಳುವ ನವೆ ನಿವಾರಣೆಯಾಗುತ್ತದೆ ಮತ್ತು ತ್ವಚೆ ಮೃದುವಾಗಿ ಕೋಮಲವಾಗುತ್ತದೆ. ಮಳಿಗೆಗಳಲ್ಲಿ ಸಿಗುವ ಮಾಯಿಶ್ಚರೈಸರ್ ಬಳಸುವ ಬದಲು ಎಳ್ಳೆಣ್ಣೆಯನ್ನು ಬೆಳಿಗ್ಗೆ ರಾತ್ರಿ ಹಚ್ಚಿ ನೋಡಿ. ನಿಮ್ಮ ತ್ವಚೆಯ ಎಲ್ಲ ಸಮಸ್ಯೆಗಳೂ ದೂರವಾಗುವುದನ್ನು ನೀವೇ ನೋಡಿ.