ನಟಿ ತಮನ್ನಾರ ‘ಕಾವಲಾ’ ಹಾಡಿಗೆ ಶಾಲಾ ಬಾಲಕಿಯ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್

ಟಾಲಿವುಡ್ ನಟಿ ತಮನ್ನಾ ಭಾಟಿಯಾ ಮತ್ತು ರಜನಿಕಾಂತ್ ಅವರ ‘ಜೈಲರ್’ ಸಿನಿಮಾದ ಹಾಡು ‘ಕಾವಾಲಾ’ ಸದ್ಯ ಇಂಟರ್ನೆಟ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಈ ಹಾಡಿಗೆ ನಟಿ ತಮನ್ನಾ ಸಖತ್ ಆಗಿನೇ ಸೊಂಟ ಬಳುಕಿಸಿದ್ದಾರೆ. ನಟಿಯಂತೆಯೇ ಹಲವರು ಸ್ಟೆಪ್ಸ್ ಹಾಕಿ ಖುಷಿಪಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಾವಾಲಾ ಹಾಡಿಗೆ ನೃತ್ಯ ಮಾಡುವ ಅನೇಕ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು. ಇದೀಗ ಶಾಲಾ ಬಾಲಕಿಯೊಬ್ಬಳು ಡ್ಯಾನ್ಸ್ ಮಾಡಿರುವ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಶಾಲಾ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿಯೊಬ್ಬಳು ತರಗತಿಯೊಳಗೆ ಕಾವಾಲಾ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ವಿದ್ಯಾರ್ಥಿನಿ ನೃತ್ಯ ಮಾಡುತ್ತಿದ್ರೆ ಈಕೆಯ ಗೆಳತಿಯರೆಲ್ಲರೂ ನಿಂತು ಹುರಿದುಂಬಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಾಲಕಿಯ ನೃತ್ಯ ಕಂಡು ನೆಟ್ಟಿಗರು ತಲೆದೂಗಿದ್ದಾರೆ.

ಅಂದಹಾಗೆ, ಜೈಲರ್ ಸಿನಿಮಾದ ಹಾಡು ಕಾವಲಾದಲ್ಲಿ ತಮನ್ನಾ ಭಾಟಿಯಾ ಅವರ ಡಾನ್ಸ್ ಮಾತ್ರ ಬಿರುಗಾಳಿ ಎಬ್ಬಿಸಿದೆ ಎಂದು ಹೇಳಿದ್ರೆ ತಪ್ಪಾಗಲಾರದು. ನಟಿಯ ಡಾನ್ಸ್ ಗೆ ನೆಟ್ಟಿಗರು ಮಂತ್ರಮುಗ್ಧಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read