
ಹುಡುಗರು ತಮ್ಮ ತರಗತಿಯ ಹುಡುಗಿಯರು ಪ್ರತಿ ಸಾಲಿನಲ್ಲಿ ಮೊದಲ ಎರಡು ಸೀಟುಗಳನ್ನು ಸತತವಾಗಿ ಆಕ್ರಮಿಸಿಕೊಂಡಿದ್ದಾರೆ, ತಮ್ಮ ಮೇಜಿನ ಮೇಲೆ ಅವರ ಉದ್ದನೆಯ ಜಡೆ ಕೂದಲು ಬೀಳುತ್ತದೆ. ಇದನ್ನು ನಾವು ನಿಭಾಯಿಸಬೇಕಾಗುತ್ತದೆ ಎಂದು ಅರ್ಜಿ ಬರೆದಿದ್ದು ಜನರಿಗೆ ಇದು ಹಾಸ್ಯದಂತಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಚಿತ್ರವನ್ನು ಹಂಚಿಕೊಡಿದ್ದು “ನನ್ನ ಕಿರಿಯ ಸಹೋದರ ಮತ್ತು ಅವನ ತರಗತಿ ಹುಡುಗರಿಗೆ ಪ್ರತ್ಯೇಕ ಸಾಲು ಬೇಕು” ಎಂದು ಎಕ್ಸ್ ಬಳಕೆದಾರರಾದ ಅಪೂರ್ವ ಬರೆದಿದ್ದಾರೆ. ಪ್ರಾಂಶುಪಾಲರನ್ನು ಉದ್ದೇಶಿಸಿ ಸಲ್ಲಿಸಲಾದ ಅರ್ಜಿಯಲ್ಲಿ, “ಹುಡುಗಿಯರು ತರಗತಿಯ ಸಾಲಿನಲ್ಲಿ ಮೊದಲ ಎರಡು ಸ್ಥಾನಗಳನ್ನು ವಶಪಡಿಸಿಕೊಳ್ಳುವ ಕಾರಣ ಹುಡುಗಿಯರಿಗೆ ಪ್ರತ್ಯೇಕ ಸಾಲನ್ನು ನೀಡಬೇಕೆಂದು ನಾವು (ಎಲ್ಲಾ ಹುಡುಗರು) ವಿನಂತಿಸುತ್ತೇವೆ. ಹುಡುಗಿಯರ ಹಿಂದೆ ಕುಳಿತುಕೊಳ್ಳುವ ಹುಡುಗರು ತಮ್ಮ ಡೆಸ್ಕ್ ಗಳಿಗೆ ಹೋಗಲು ಹುಡುಗಿಯರ ಉದ್ದನೆಯ ತಲೆಕೂದಲನ್ನು ಎದುರಿಸಬೇಕಾಗುತ್ತದೆ” ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅರ್ಜಿಯಲ್ಲಿ ಆ ದಿನ ತರಗತಿಯಲ್ಲಿದ್ದ ಎಲ್ಲ ಹುಡುಗರ ಸಹಿಯೂ ಇದೆ.
ಈ ಅರ್ಜಿ ಫೋಟೋ ಹಂಚಿಕೊಂಡ ನಂತರ ಪೋಸ್ಟ್ ಐದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 8,400 ಕ್ಕೂ ಹೆಚ್ಚು ಲೈಕ್ಸ್ ಸ್ವೀಕರಿಸಿದೆ.