
ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ ಟಿ. ತಿಮ್ಮಯ್ಯ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಾಲ್ವರು ಮಕ್ಕಳನ್ನು ಹಿರಿಯ ನಟರಾದ ಟಿ. ತಿಮ್ಮಯ್ಯ ಅಗಲಿದ್ದಾರೆ.
ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಟಿ. ತಿಮ್ಮಯ್ಯ ಅಭಿನಯಿಸಿದ್ದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಖ್ಯಾತ ನಿರ್ದೇಶಕರಾದ ದೊರೆ ಭಗವಾನ್, ಸುನಿಲ್ ಕುಮಾರ್ ದೇಸಾಯಿ, ಭಾರ್ಗವ, ಕೆ.ವಿ. ಜಯರಾಮ್ ಸೇರಿದಂತೆ ಅನೇಕರೊಂದಿಗೆ ಅವರು ಕೆಲಸ ಮಾಡಿದ್ದಾರೆ.
‘ಚಲಿಸುವ ಮೋಡಗಳು’, ‘ಪ್ರತಿ ಧ್ವನಿ’, ‘ಬಂಧನ’, ‘ಬೆಂಕಿಯ ಬಲೆ’, ಸೇರಿದಂತೆ ಹಲವು ಸಿನಿಮಾಗಳಲ್ಲಿ ಹಿರಿಯ ನಟರಾದ ತಿಮ್ಮಯ್ಯ ಅಭಿನಯಿಸಿದ್ದರು. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.