ಮುಂದೆ ಸಾಗುವ ವಾಹನಗಳನ್ನು ಓವರ್‌ಟೇಕ್ ಮಾಡುವ ಮುನ್ನ ನೀವು ಮೊದಲು ನಿಮ್ಮ ಹಿಂದೆ ಬರುತ್ತಿರುವ ವಾಹನಗಳ ಗತಿಯ ಸರಿಯಾದ ಅಂದಾಜು ಪಡೆಯಲು ಕನ್ನಡಿಯನ್ನೊಮ್ಮೆ ನೋಡಬೇಕು. ಹೀಗೆ ಮಾಡಲು ವಿಫಲವಾದಲ್ಲಿ ನೀವು ಅಂದಾಜಿಸದೇ ಇರುವ ವಾಹನವೊಂದು ಇದ್ದಕ್ಕಿದ್ದಂತೆ ಬಂದು ನಿಮಗೆ ಗುದ್ದುವ ಸಾಧ್ಯತೆ ಇರುತ್ತದೆ. ಹೀಗಾಗಿ ನೀವು ಯಾವಾಗಲೂ ಲೇನ್ ಬದಲಿಸುವ ಮುನ್ನ ಅಗತ್ಯವಾಗಿ ಕನ್ನಡಿಯನ್ನೊಮ್ಮೆ ನೋಡಿಕೊಳ್ಳಿ.
2. ಇಂಡಿಕೇಟರ್
ಓವರ್‌ಟೇಕ್ ಮಾಡುವಾಗ ಮುಖ್ಯವಾಗಿ ಮಾಡಬೇಕಾದ ಮತ್ತೊಂದು ಕೆಲಸ ಟರ್ನ್ ಸಿಗ್ನಲ್ (ಇಂಡಿಕೇಟರ್) ಬಳಸದೇ ಇರುವುದು. ಹೀಗೆ ಮಾಡುವುದರಿಂದ ನಿಮ್ಮ ಸುತ್ತಲೂ ಇರುವ ವಾಹನಗಳ ಸವಾರರಿಗೆ ನೀವು ಮುಂದೆ ಮಾಡಬಹುದಾದ ಕೆಲಸದ ಬಗ್ಗೆ ಸೂಚನೆ ಸಿಗುತ್ತದೆ. ಸಾಮಾನ್ಯವಾಗಿ ಲೇನ್‌ನಿಂಧ ಹೊರಗೆ ಬರುವ 5-8 ಸೆಕೆಂಡ್‌ಗಳ ಮುಂಚಿನಿಂದ ಇಂಡಿಕೇಟರ್ ಬಳಸಬೇಕಾಗುತ್ತದೆ.
BIG NEWS: ಚೀನಾದಿಂದ ಮಹಾ ಪ್ರಮಾದ, ಗಡಿಯಲ್ಲಿ ಮತ್ತೊಂದು ಗ್ರಾಮ ನಿರ್ಮಾಣ
3. ತಿರುವುಗಳಲ್ಲಿ ಓವರ್‌ಟೇಕ್
ತಿರುವುಗಳಲ್ಲಿ ಓವರ್‌ಟೇಕ್ ಮಾಡಬಾರದು ಎಂದು ಅರಿತಿದ್ದರೂ ಸಹ ಈ ವಿಷಯವನ್ನು ಬಹಳಷ್ಟು ಮಂದಿ ನಿರ್ಲಕ್ಷ್ಯ ಮಾಡುತ್ತಾರೆ. ತಿರುವುಗಳಲ್ಲಿ ಸಾಗುವ ವೇಳೆ ನಿಮ್ಮ ಕಣ್ಣಳತೆಯು ಮುಂದಿನಿಂದ ಯಾವ ವಾಹನ ಬರುತ್ತಿದೆ ಎಂದು ಅಂದಾಜು ನೀಡುವುದಿಲ್ಲ. ಹೀಗಾಗಿ ತಿರುವುಗಳಲ್ಲಿ ಓವರ್‌ಟೇಕ್ ಮಾಡಲು ಹೋಗಬಾರದು.
4. ಒಂದೇ ಬಾರಿಗೆ ಬಹು ವಾಹನಗಳ ಓವರ್‌ಟೇಕ್
ಕೆಲವೊಮ್ಮೆ ನೀವು ಅದೆಷ್ಟು ಆತುರದಲ್ಲಿ ಇರುತ್ತೀರಿ ಎಂದರೆ, ತಲುಪಬೇಕಾದ ಜಾಗವನ್ನು ಆದಷ್ಟು ಬೇಗ ತಲುಪುವ ಭರದಲ್ಲಿ ದಾರಿಯಲ್ಲಿ ಸಿಕ್ಕ ಪ್ರತಿಯೊಂದು ವಾಹನವನ್ನೂ ಹಿಂದಿಕ್ಕುವ ಆತುರಕ್ಕೆ ಬೀಳುತ್ತೇವೆ. ಹೀಗೆ ಮಾಡುವಾಗ ಕೆಲವೊಮ್ಮೆ ನೀವು ಇದ್ದಕ್ಕಿದ್ದಂತೆಯೇ ಎದುರು ದಿಕ್ಕಿನಿಂದ ವಾಹನಗಳು ಬಂದಲ್ಲಿ ಲೇನ್ ಒಳಗೆ ಬರಲು ಆಗುವುದಿಲ್ಲ ಅಥವಾ ಗಡಿಬಿಡಿಯಲ್ಲಿ ನಿಮ್ಮದೇ ಲೇನ್‌ನಲ್ಲಿ ಬರುತ್ತಿರುವ ವಾಹನಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆ ಇರುತ್ತದೆ.
ಐರನ್ ಮ್ಯಾನ್ ಸೂಟ್ ನಿರ್ಮಿಸಿದ ಮಣಿಪುರದ ವಿದ್ಯಾರ್ಥಿಗೆ ಉದ್ಯಮಿ ಆನಂದ್ ಮಹೀಂದ್ರಾ ಸಹಾಯಹಸ್ತ
5. ಓವರ್‌ಟೇಕ್ ಮಾಡುತ್ತಿರುವ ವಾಹನದ ಓವರ್‌ಟೇಕ್
ಅದಾಗಲೇ ನಿಮ್ಮ ಮುಂದೆ ಸಾಗುತ್ತಿರುವ ಮತ್ತೊಂದು ವಾಹನವನ್ನು ಓವರ್‌ಟೇಕ್ ಮಾಡುತ್ತಿರುವ ವಾಹನವನ್ನು ಅದೇ ಸಮಯದಲ್ಲಿ ನೀವು ಓವರ್‌ಟೇಕ್ ಮಾಡುವುದು ಬಹಳ ಅಪಾಯಕಾರಿ.
ರಸ್ತೆಯಲ್ಲಿ ನೀವು ಮಾಡುವ ಯಾವುದೇ ಸಾಹಸಗಳಿಂದ ಆಗುವ ಜೀವಹಾನಿಯನ್ನು ಹಾಗೆ ಮಾಡಿ ಉಳಿಸಿದ ಅದೆಷ್ಟೇ ಸಮಯವಾದರೂ ಸರಿದೂಗಿಸಲಾರದು ಎಂಬುದು ಎಲ್ಲಕ್ಕಿಂತ ಮೊದಲು ನಿಮಗೆ ಅರಿವಿರಲಿ.