
ಡೈನಾಮಿಕ್ ಸ್ಟಾರ್ ದೇವರಾಜ್ ಪುತ್ರ ಪ್ರಣಮ್ ಅಭಿನಯದ ‘S/o ಮುತ್ತಣ್ಣ’ ಸಿನಿಮಾದ ಫಸ್ಟ್ ಫಸ್ಟ್ ಲುಕ್ಕನ್ನು ಬಿಡುಗಡೆ ಮಾಡಲಾಗಿದೆ. ಶ್ರೀಕಾಂತ್ ಹುಣಸೂರ್ ನಿರ್ದೇಶನದ ಈ ಚಿತ್ರಕ್ಕೆ ಪುರಾತನ ಫಿಲಂಸ್ ಲಾಂಛನದಲ್ಲಿ ಶಾಂತ ಮೂರ್ತಿ ಬಂಡವಾಳ ಹೂಡಿದ್ದು, ಸಂಗೀತ ಸಹ ನಿರ್ಮಾಪಕರಿಗೆ ಕೆಲಸ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಪ್ರಣಮ್ ದೇವರಾಜ್ ಜೊತೆ ‘ದಿಯಾ’ ಖ್ಯಾತಿಯ ಖುಷಿ ರವಿ ನಾಯಕಿಯಾಗಿ ಅಭಿನಯಿಸಿದ್ದು, ಸುಧಾ ಬೆಳವಾಡಿ, ರಂಗಾಯಣ ರಘು, ತಬಲ ನಾಣಿ, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ಶ್ರೀನಿವಾಸ್ ಪ್ರಭು, ಅರುಣ್ ಚಕ್ರವರ್ತಿ ತೆರೆ ಹಂಚಿಕೊಂಡಿದ್ದಾರೆ. ಸಚಿನ್ ಬಸರೂರು ಸಂಗೀತ, ಹರೀಶ್ ಕೊಮ್ಮೆ ಸಂಕಲನ, ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣವಿದೆ,
