ಬಾಲಿವುಡ್ನ ತಾರಾ ಜೋಡಿಗಳ ವಿಚ್ಛೇದನಗಳು ಯಾವಾಗಲೂ ಸುದ್ದಿಯಾಗುತ್ತವೆ. 2025ರ ಆರಂಭದಲ್ಲೇ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಗೋವಿಂದ ಮತ್ತು ಸುನೀತಾ ಅಹುಜಾ ಸಹ ಬೇರೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಆ ವದಂತಿಯನ್ನು ಅವರು ನಿರಾಕರಿಸಿದ್ದಾರೆ. ಕಳೆದ ವರ್ಷಗಳಲ್ಲಿ ಬಾಲಿವುಡ್ನ ಅನೇಕ ಜೋಡಿಗಳು ವಿಚ್ಛೇದನ ಪಡೆದಿದ್ದಾರೆ.
ಹೃತಿಕ್ ರೋಷನ್ ಮತ್ತು ಸುಸಾನ್ ಖಾನ್ 2000ದಲ್ಲಿ ಮದುವೆಯಾಗಿ 2014ರಲ್ಲಿ ವಿಚ್ಛೇದನ ಪಡೆದರು. ಇಬ್ಬರು ಗಂಡು ಮಕ್ಕಳಿರುವ ಈ ಜೋಡಿ ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ. ಹೃತಿಕ್, ಸುಸಾನ್ಗೆ 380 ಕೋಟಿ ರೂ. ಜೀವನಾಂಶ ನೀಡಿದ್ದಾರೆ ಎಂದು ವರದಿಯಾಗಿದೆ.
ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್ 2003ರಲ್ಲಿ ಮದುವೆಯಾಗಿ 2016ರಲ್ಲಿ ಬೇರೆಯಾದರು. ಕರಿಷ್ಮಾ 70 ಕೋಟಿ ರೂ. ಹಾಗೂ ಐಷಾರಾಮಿ ಮನೆಯನ್ನು ಪರಿಹಾರವಾಗಿ ಪಡೆದಿದ್ದಾರೆ. ಆಮಿರ್ ಖಾನ್, ಮಲೈಕಾ ಅರೋರಾ, ಸೈಫ್ ಅಲಿ ಖಾನ್, ಫರ್ಹಾನ್ ಅಖ್ತರ್ ಮುಂತಾದವರೂ ದುಬಾರಿ ವಿಚ್ಛೇದನಗಳನ್ನು ಪಡೆದಿದ್ದಾರೆ.