ಕಳ್ಳರು, ಪುಂಡರು ಮತ್ತು ದರೋಡೆಕೋರರಂತಹ ಸಮಾಜ ವಿರೋಧಿ ಶಕ್ತಿಗಳು ಯಾವಾಗಲೂ ಅಪರಾಧ ಕೃತ್ಯವೆಸಗಲು ಅವಕಾಶವನ್ನು ಹುಡುಕುತ್ತಿರುತ್ತವೆ. ಅವರು ನಿಮ್ಮ ಮನೆ, ಬ್ಯಾಂಕ್, ಕೆಲಸದ ಸ್ಥಳ ಅಥವಾ ರಸ್ತೆಗಳ ಒಳಗೆ ಎಲ್ಲಿ ಬೇಕಾದರೂ ತಮ್ಮ ದುಷ್ಕೃತ್ಯ ಮಾಡಬಹುದು. ಅವರು ಹೆಚ್ಚಾಗಿ ವಯಸ್ಸಾದವರು, ಮಕ್ಕಳು, ಮಹಿಳೆಯರಂಥ ಸಾಫ್ಟ್ ಟಾರ್ಗೆಟ್‌ಗಳನ್ನು ಹುಡುಕುತ್ತಾರೆ ಮತ್ತು ಅಪರಾಧ ಕೃತ್ಯವನ್ನು ನಡೆಸಲು ಅತ್ಯಂತ ಸೂಕ್ತವಾದ ಸಮಯವೆಂದರೆ ಕತ್ತಲೆಯಾಗಿರುವಾಗ ಮತ್ತು ಅದು ನಿರ್ಜನ ರಸ್ತೆಯಾಗಿದ್ದರೆ ಅದು ಅವರಿಗೆ ಬೋನಸ್ ಆಗಿದೆ.
ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ವೈರಲ್ ವೀಡಿಯೊ ತೋರಿಸುವುದು ಇದನ್ನೇ. ಕತ್ತಲೆಯಾಗಿದ್ದು, ನಿರ್ಜನ ರಸ್ತೆಯ ಬದಿಯಲ್ಲಿ ದಂಪತಿ ನಡೆದು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದ್ದಕ್ಕಿದ್ದಂತೆ ಎದುರಿನಿಂದ ಬೈಕ್‌ವೊಂದು ಅವರ ಬಳಿಗೆ ಬರುತ್ತದೆ. ಒಬ್ಬ ಸವಾರ ಕೆಳಗೆ ಇಳಿದು ಮಹಿಳೆಯಿಂದ ಏನನ್ನಾದರೂ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಕೆಲವು ಕ್ಷಣಗಳವರೆಗೆ, ದಂಪತಿ ಆಘಾತಕ್ಕೊಳಗಾಗುತ್ತಾರೆ ಮತ್ತು ಮಹಿಳೆ ಓಡಿಹೋಗಲು ಪ್ರಯತ್ನಿಸುತ್ತಾಳೆ.
ಪುರುಷನು ದಾಳಿಕೋರನನ್ನು ನೆಲಕ್ಕೆ ತಳ್ಳುತ್ತಾನೆ ಮತ್ತು ಹೊಡೆಯಲು ಪ್ರಾರಂಭಿಸುತ್ತಾನೆ. ಈ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಸಹಾಯಕ್ಕೆ ಬರುತ್ತಾನೆ. ಇದನ್ನು ನೋಡಿ ಬೈಕ್ ನಲ್ಲಿದ್ದ ವ್ಯಕ್ತಿ ಓಡಿ ಹೋಗಿದ್ದಾನೆ. ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ರಾತ್ರಿ ಹೀಗೆಲ್ಲಾ ಅಡ್ಡಾಡಬೇಡಿ ಎಂದು ಪೊಲೀಸರೂ ಎಚ್ಚರಿಕೆ ನೀಡಿದ್ದಾರೆ.