alex Certify ಮಹಿಳೆಯರ ಪಾಲಿಗೆ ಅಪಾಯಕಾರಿ ಪುನರಾವರ್ತಿತ ಗರ್ಭಪಾತ; ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರ ಪಾಲಿಗೆ ಅಪಾಯಕಾರಿ ಪುನರಾವರ್ತಿತ ಗರ್ಭಪಾತ; ಅಡ್ಡ ಪರಿಣಾಮಗಳ ಬಗ್ಗೆ ನಿಮಗೆ ತಿಳಿದಿರಲಿ

ಹೆಚ್ಚಿನ ಮಹಿಳೆಯರಿಗೆ ಗರ್ಭಾವಸ್ಥೆಯು ಬಹಳ ಸೂಕ್ಷ್ಮವಾದ ಸಮಯವಾಗಿರುತ್ತದೆ. ಆದರೆ ಅನೇಕ ಬಾರಿ ವಿವಿಧ ಕಾರಣಗಳಿಂದಾಗಿ ಗರ್ಭಪಾತ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇದು ತಾಯಿ ಮತ್ತು ಇಡೀ ಕುಟುಂಬಕ್ಕೆ ನೋವುಂಟು ಮಾಡುವ ಸಂಗತಿ. ಕೆಲವೊಮ್ಮೆ ಆನುವಂಶಿಕ ಅಥವಾ ಜೀವನಶೈಲಿ ಸಂಬಂಧಿತ ಕಾರಣಗಳಿಂದಾಗಿ ಗರ್ಭಪಾತ ಸಂಭವಿಸುತ್ತದೆ.

ಗರ್ಭಪಾತವನ್ನು ಎರಡು ರೀತಿಯಲ್ಲಿ ಮಾಡಲಾಗುತ್ತದೆ. ಒಂದು ಔಷಧಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಇನ್ನೊಂದು ಶಸ್ತ್ರಚಿಕಿತ್ಸಾ ಉಪಕರಣಗಳ ಮೂಲಕ. ಪುನರಾವರ್ತಿತ ಗರ್ಭಪಾತ ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ.

ಗರ್ಭಪಾತದ ಅಡ್ಡಪರಿಣಾಮಗಳು

ಗರ್ಭಪಾತದ ನಂತರ ಮಹಿಳೆಯರು ದೀರ್ಘಕಾಲದವರೆಗೆ ರಕ್ತಸ್ರಾವದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದು 15 ರಿಂದ 25 ದಿನಗಳವರೆಗೆ ಮುಂದುವರಿಯುತ್ತದೆ. ಪರಿಣಾಮ ದೇಹದಲ್ಲಿ ಸಾಕಷ್ಟು ರಕ್ತದ ಕೊರತೆಯಾಗುತ್ತದೆ. ಇದರಿಂದ ಬಲಹೀನತೆ ಉಂಟಾಗಬಹುದು. ಅಷ್ಟೇ ಅಲ್ಲ ಹೊಟ್ಟೆನೋವು, ಸೆಳೆತ, ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ ಹೀಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಗರ್ಭಪಾತದ ನಂತರ ಗರ್ಭಾಶಯ ಮತ್ತು ಗರ್ಭಾಶಯದ ಕೊಳವೆಗೆ ಕೂಡ ಹಾನಿಯಾಗುತ್ತದೆ. ಗರ್ಭಾಶಯದ ಒಳಪದರವು ತುಂಬಾ ದುರ್ಬಲವಾಗುತ್ತದೆ, ಇದರಿಂದ ನಂತರ ಮತ್ತೆ ಗರ್ಭಿಣಿಯಾಗಲು ಕಷ್ಟವಾಗಬಹುದು. ಗರ್ಭಪಾತದ ನಂತರ ಹೆಚ್ಚಿನ ಮಹಿಳೆಯರ ಮುಟ್ಟು ಅನಿಯಮಿತವಾಗುತ್ತದೆ.

ಗರ್ಭಾಶಯದ ಛಿದ್ರ ಸಂಭವಿಸಬಹುದು!

ಗರ್ಭಪಾತವನ್ನು ಪದೇ ಪದೇ ಮಾಡಿಸಿದರೆ ಫಾಲೋಪಿಯನ್ ಟ್ಯೂಬ್ ಕೂಡ ಹಾನಿಗೊಳಗಾಗುತ್ತದೆ, ಇದು ಭವಿಷ್ಯದಲ್ಲಿ ಗರ್ಭಧರಿಸಲು ತೊಂದರೆ ಉಂಟುಮಾಡಬಹುದು. ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಪಾತ ಮಾಡಿಸಿದರೆ ಗಾಯ ಗುಣವಾಗಲು ಸಮಯ ಬೇಕು. ಸೆಪ್ಟಿಕ್ ಮತ್ತು ಸೆಪ್ಸಿಸ್ ಸೋಂಕಿನ ಅಪಾಯವು ಹೆಚ್ಚಾಗುತ್ತದೆ. ಗರ್ಭಪಾತವು ಮತ್ತೆ ಮತ್ತೆ ಸಂಭವಿಸುತ್ತಿದ್ದರೆ, ಗರ್ಭಾಶಯದ ಛಿದ್ರತೆಯ ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಕೆಲವೊಮ್ಮೆ ಈ ಅಪಾಯಗಳಿಂದ ಮಹಿಳೆಯ ಸಾವೂ ಸಂಭವಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...