ಪ್ರತಿದಿನ ಕೆಲವರಿಗೆ ಬ್ರೆಡ್ ಬೇಕೆ ಬೇಕು. ಬ್ರೆಡ್ ಗೆ ಜಾಮ್ ಅಥವಾ ಬೆಣ್ಣೆ, ತುಪ್ಪ ಹಾಕಿಕೊಂಡು ತಿಂತಾರೆ. ಆದ್ರೆ ಈ ಬ್ರೆಡ್ ಸೇವನೆ ಒಳ್ಳೆಯದಲ್ಲ. ಮೈದಾದಿಂದ ಮಾಡಿರುವ ಬ್ರೆಡ್ ಆರೋಗ್ಯಕ್ಕೆ ಹಾನಿಕರ.
ಬಿಳಿ ಬ್ರೆಡ್ ಅಂದರೆ ಮೈದಾದಿಂದ ಮಾಡಿರುವ ಬ್ರೆಡ್ ನಲ್ಲಿ ಪೋಷಕಾಂಶವಿರುವುದಿಲ್ಲ. ಇದರ ಸೇವನೆಯಿಂದಾಗಿ ನಮಗೆ ಪೋಷಕಾಂಶ ಸಿಗುವುದಿಲ್ಲ. ಮೈದಾದಿಂದ ಮಾಡಿದ ಬ್ರೆಡ್ ಸೇವಿಸುವ ಬದಲು ಗೋಧಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೆಡ್ ಸೇವಿಸುವುದು ಒಳ್ಳೆಯದು.
ಉಪ್ಪು ಕಡಿಮೆ ಇರುವ ಬ್ರೆಡ್ ಸೇವಿಸಬೇಕು. ಉಪ್ಪು ಜಾಸ್ತಿ ಇರುವ ಬ್ರೆಡ್ ಸೇವನೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣದಲ್ಲಿ ಏರುಪೇರಾಗುತ್ತದೆ.
ಮೈದಾ ಬ್ರೆಡ್ ಸೇವನೆಯಿಂದ ದಪ್ಪಗಾಗುವ ಸಾಧ್ಯತೆ ಇದೆ. ಮೈದಾ ಬ್ರೆಡ್ ನಲ್ಲಿ ಜಾಸ್ತಿ ಉಪ್ಪು ಹಾಗೂ ಸಕ್ಕರೆ ಅಂಶವಿರುತ್ತದೆ. ಇದನ್ನು ತಿನ್ನುವುದರಿಂದ ಬೇಗನೆ ಹಸಿವಾಗುತ್ತದೆ. ನಾವು ಮತ್ತೆ ಬ್ರೆಡ್ ಸೇವಿಸುತ್ತೇವೆ. ಆಗ ನಮ್ಮ ದೇಹದ ತೂಕ ಜಾಸ್ತಿಯಾಗುವ ಸಾಧ್ಯತೆ ಇದೆ.
ಬಿಳಿ ಬ್ರೆಡ್ ಸಂಪೂರ್ಣವಾಗಿ ಮೈದಾದಿಂದ ಮಾಡುವಂತಹದ್ದು. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು.