ಪಡಿತರ ಚೀಟಿದಾರರೇ ಗಮನಿಸಿ : `ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಇಂದು ಕೊನೆಯ ಅವಕಾಶ!

ಬೆಂಗಳೂರು : ರೇಷನ್ ಕಾರ್ಡ್ ತಿದ್ದುಪಡಿಗೆ ನೀಡಲಾಗಿದ್ದ ಅವಧಿಯನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಸೆಪ್ಟೆಂಬರ್ 14ವರೆಗೂ ವಿಸ್ತರಣೆ ಮಾಡಿತ್ತು. ತಿದ್ದುಪಡಿ ಮಾಡಲು ಇಂದು ಕೊನೆಯ ದಿನವಾಗಿದೆ.

ರೇಷನ್‌ ಕಾರ್ಡ್‌ನಲ್ಲಿ ಮಹಿಳಾ ಸದಸ್ಯೆಯನ್ನು ಯಜಮಾನಿ ಎಂದು ಗುರುತಿಸದೇ ಇದ್ದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಸಾಧ್ಯವಿಲ್ಲ. ಹೀಗಾಗಿ ರೇಷನ್‌ ಕಾರ್ಡ್‌ನಲ್ಲಿ ಮಹಿಳೆಯನ್ನು ಯಜಮಾನಿ ಎಂದು ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ.

ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ\ತಿದ್ದುಪಡಿಗೆ ಆಹಾರ ಇಲಾಖೆಯು ಸೆಪ್ಟೆಂಬರ್ 14ರವರೆಗೆ ಅವಕಾಶ ನೀಡಿದ್ದು, ಮೂರು ಹಂತಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿ ಮಾಡಬಹುದಾಗಿದೆ. ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ, ಹೆಸರು ಸೇರ್ಪಡೆ/ತೆಗೆಯುವುದು, ವಿಳಾಸ ಬದಲಾವಣೆ, ಸದಸ್ಯರ ಹೆಸರು ತಿದ್ದುಪಡಿಗೆ ಇಂದು ಬೆಳಗ್ಗೆ 10ರಿಂದ ರಾತ್ರಿ 8ರವರೆಗೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಿದ್ದು, ನಿಗದಿಪಡಿಸಿದ ಅವಧಿಯೊಳಗೆ ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read