ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್ ಹಾರ್ಟ್ ಎನ್ನಲಾಗುತ್ತದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಡಿ ಗ್ಲೋಬಲ್ ಕಂಪೆನಿಯು ಸೂರತ್ ಮತ್ತು ಮುಂಬೈನಿಂದ ಈ ಬಗ್ಗೆ ಕಾರ್ಯಾಚರಣೆ ನಡೆಸಿತ್ತು, ಕೆಲವು ಸ್ಥಳಗಳಲ್ಲಿ ವಜ್ರಗಳ ಇರುವಿಕೆ ತಿಳಿದಿತ್ತು. ಈ ಕಂಪೆನಿಯು ಪ್ರಪಂಚದಾದ್ಯಂತ ವಜ್ರದ ವ್ಯಾಪಾರವನ್ನು ಹೊಂದಿದೆ.
ಆದರೆ ಇದೇ ಮೊದಲ ಬಾರಿಗೆ ಅಸಾಧಾರಣವಾದ ‘ವಜ್ರದೊಳಗಿನ ವಜ್ರ’ ಲಭ್ಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಡಿ ಬೀರ್ಸ್ ಗ್ರೂಪ್ ಸೈಟ್‌ಹೋಲ್ಡರ್ ವಿಡಿ ಗ್ಲೋಬಲ್‌ನ ಅಧ್ಯಕ್ಷರಾದ ವಲ್ಲಭ್ ವಘಾಸಿಯಾ ಅವರು, “ಈಗ ಸಿಕ್ಕಿರುವ ವಜ್ರವನ್ನು ಪರಿಶೀಲಿಸಿದಾಗ ಇದು ಅಪರೂಪದಲ್ಲಿ ಅಪರೂಪ ಎಂದು ತಿಳಿದುಬಂದಿದೆ. ಏಕೆಂದರೆ ಒಂದು ವಜ್ರದ ಒಳಗೆ ಇನ್ನೊಂದು ವಜ್ರದ ತುಂಡು ಸಿಕ್ಕಿಬಿದ್ದಿದೆ. ಆದರೆ ಮುಕ್ತವಾಗಿ ಚಲಿಸುತ್ತಿದೆ. ನಾವು ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ.