ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯದ ಗೌಡತಿ. ಮಂಡ್ಯ ನನ್ನ ತಾಯಿ ಊರು ಮತ್ತು ತಂದೆ ಮೃತಪಟ್ಟ ಊರು. ನನಗೆ ಮಂಡ್ಯದ ಮೇಲೆ ಇರುವ ಗೌರವ, ಪ್ರೀತಿ ಎಂದಿಗೂ ಕಡಿಮೆಯಾಗಿಲ್ಲ. ಮಂಡ್ಯ ಜೊತೆಗೆ ನನಗೆ ರಾಜಕೀಯ ಸಂಬಂಧ ಮಾತ್ರವಲ್ಲ, ಕೌಟುಂಬಿಕ ಸಂಬಂಧವೂ ಇದೆ ಎಂದು ಹೇಳಿದ್ದಾರೆ.
ನಾನು ಸೋತಿದ್ದಕ್ಕೆ ಬೇಸರ ಮಾಡಿಕೊಂಡಿಲ್ಲ. ಸೋತ ನಂತರವೂ ಅನೇಕ ಸಲ ಮಂಡ್ಯಕ್ಕೆ ಬಂದಿದ್ದೇನೆ. ಪಾಂಡವಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿದ್ದೇನೆ ಎಂದು ಹೇಳಿದ್ದಾರೆ.
ನನಗೆ ರಾಜಕೀಯದಲ್ಲಿ ಆಸಕ್ತಿ ಇದೆಯೇ ಇಲ್ಲವೇ ಎನ್ನುವುದಕ್ಕಿಂತ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದು ಮುಖ್ಯ. ಮಂಡ್ಯ ಜನತೆ ಬುದ್ಧಿವಂತರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಜಯಗಳಿಸಲಿದ್ದಾರೆ. ಮೈಸೂರು, ಹುಬ್ಬಳ್ಳಿ, ಧಾರವಾಡ, ವಿಜಯಪುರ ಮೊದಲಾದ ಕಡೆ ಪ್ರಚಾರಕ್ಕೆ ತೆರಳುವುದಾಗಿ ರಮ್ಯಾ ತಿಳಿಸಿದ್ದಾರೆ.