ಜನವರಿ 22ರ ಸೋಮವಾರ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ ಗಣ್ಯಾತಿಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಅಯೋಧ್ಯೆ ರಾಮ ಮಂದಿರ ಕುರಿತು ಕೆಲವು ಕುತೂಹಲಕರ ಸಂಗತಿಗಳು ಈ ಕೆಳಗಿನಂತಿವೆ.
ಭಾರತದ ಅತಿ ದೊಡ್ಡ ದೇವಾಲಯ ಇದಾಗಿದ್ದು, 70 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ ಶೇಕಡ 70ರಷ್ಟು ಭಾಗ ಹಸಿರಿನಿಂದ ಆವೃತವಾಗಿದೆ.
ಮೂರು ಅಂತಸ್ತಿನ ರಾಮ ಮಂದಿರವನ್ನು ಸಾಂಪ್ರದಾಯಿಕ ನಗರ ಶೈಲಿಯಲ್ಲಿ ನಿರ್ಮಿಸಲಾಗಿದೆ.
ಮುಖ್ಯ ದೇವಸ್ಥಾನವನ್ನು 2.67 ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
ಈ ದೇವಸ್ಥಾನವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿರ್ಮಿಸಲಾಗಿದ್ದು, 18,000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.
ದೇಗುಲದ ವಿನ್ಯಾಸ ಉತ್ತರ ಹಾಗೂ ದಕ್ಷಿಣ ಭಾರತ ಶೈಲಿಯಲ್ಲಿದೆ.
ಮೂರು ಅಂತಸ್ತಿನ ದೇಗುಲದ ಪ್ರತಿ ಅಂತಸ್ತಿನ ಎತ್ತರ 20 ಅಡಿಗಳಾಗಿದೆ.
ಪ್ರಾಣ ಪ್ರತಿಷ್ಠೆ ಮಾಡಲಾದ ರಾಮಲಲ್ಲಾ ವಿಗ್ರಹವನ್ನು ಎಂಟು ಲೋಹಗಳಿಂದ ತಯಾರಿಸಲಾಗಿದ್ದು ಇದರ ತೂಕ 2100 ಕೆಜಿಗಳಾಗಿದೆ.
ಶ್ರೀ ರಾಮನ ದರ್ಶನಕ್ಕೆ ಆಗಮಿಸುವವರಿಗೆ ಉಚಿತ ಅನ್ನಪ್ರಸಾದ ನೀಡಲಾಗುತ್ತದೆ.