ರಾಜ್ಯಸಭೆ ಕಲಾಪದಲ್ಲಿ ಗದ್ದಲ ನಡೆಸಿದ ಆರೋಪದ ಮೇರೆಗೆ ಪ್ರತಿ ಪಕ್ಷದ 12 ಸಂಸದರ ವಿರುದ್ಧ ಹಕ್ಕುಚ್ಯುತಿ ಕುರಿತು ತನಿಖೆ ನಡೆಸಲು ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಆದೇಶಿಸಿದ್ದಾರೆ.
ಸಂಸತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ರಾಜ್ಯಸಭಾ ಸಭಾಪತಿಗಳ ಕಾರ್ಯಾಲಯದಿಂದ ಸೋಮವಾರದಂದು ಈ ಕುರಿತು ನಿರ್ದೇಶನ ನೀಡಲಾಗಿದ್ದು, 12 ಸದಸ್ಯರ ಪೈಕಿ ಕಾಂಗ್ರೆಸ್ಸಿನ 9 ಹಾಗೂ ಆಮ್ ಆದ್ಮಿ ಪಕ್ಷದ 3 ಮಂದಿ ಇದ್ದಾರೆ.
12 ಸಂಸದರ ಹೆಸರುಗಳು ಇಂತಿವೆ. ಕಾಂಗ್ರೆಸ್ ಪಕ್ಷದ ಶಕ್ತಿ ಸಿನ್ಹ್ ಗೋಯಲ್, ನರನ್ ಭಾಯ್ ಜೆ. ರಥ್ವಾ, ಸೈಯದ್ ನಾಸೀರ್ ಹುಸೇನ್, ಕುಮಾರ್ ಕೇತ್ಕರ್, ಇಮ್ರಾನ್ ಪ್ರತಾಪ್ ಗರ್ಹಿ, ಎಲ್. ಹನುಮಂತಯ್ಯ, ಪುಲೋದೇವಿ ನೇತಮ್, ಜೆ.ಬಿ. ಮಾಥುರ್ ಹಿಶಾಮ್, ರಂಜಿತ್ ರಂಜನ್ ಹಾಗೂ ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಸುಶೀಲ್ ಕುಮಾರ್ ಗುಪ್ತಾ ಮತ್ತು ಸಂದೀಪ್ ಕುಮಾರ್ ಪಾಠಕ್ ವಿರುದ್ಧ ತನಿಖೆ ನಡೆಸಲಾಗುತ್ತದೆ.