alex Certify ಭಕ್ತರನ್ನು ಕೈಬೀಸಿ ಕರೆಯುತ್ತೆ ಜಮ್ಮುವಿನ ರಘುನಾಥ ದೇವಾಲಯ; ಇಲ್ಲಿ ನೆಲೆಸಿದ್ದಾರೆ 33 ಕೋಟಿ ದೇವತೆಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತರನ್ನು ಕೈಬೀಸಿ ಕರೆಯುತ್ತೆ ಜಮ್ಮುವಿನ ರಘುನಾಥ ದೇವಾಲಯ; ಇಲ್ಲಿ ನೆಲೆಸಿದ್ದಾರೆ 33 ಕೋಟಿ ದೇವತೆಗಳು…!

ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ. ಜಮ್ಮುವಿನ ರಘುನಾಥ ದೇವಾಲಯ ಕೂಡ ಬಹಳ ವಿಶಿಷ್ಟವಾಗಿದೆ. ಇದು ಭಗವಾನ್ ಶ್ರೀರಾಮನ ದೇವಾಲಯ. 2002ರಲ್ಲಿ ಈ ದೇವಸ್ಥಾನದ ಮೇಲೆ ಎರಡು ಬಾರಿ ಭಯೋತ್ಪಾದಕ ದಾಳಿ ನಡೆದಿತ್ತು. ಶ್ರೀರಾಮನ ಜೊತೆಗೆ 33 ಕೋಟಿ ದೇವಾನುದೇವತೆಗಳು ಈ ದೇವಾಲಯದಲ್ಲಿ ನೆಲೆಸಿದ್ದಾರೆ. ದೇವರ ದರ್ಶನ ಪಡೆಯಲು ದೇಶ-ವಿದೇಶಗಳಿಂದ ಪ್ರತಿದಿನ ಸುಮಾರು 2 ಸಾವಿರಕ್ಕೂ ಹೆಚ್ಚು ಭಕ್ತರು ಬರುತ್ತಾರೆ.

ರಘುನಾಥ ದೇವಾಲಯವನ್ನು 1857 ರಲ್ಲಿ ಮಹಾರಾಜ ರಣವೀರ್ ಸಿಂಗ್ ಮತ್ತು ಅವರ ತಂದೆ ಮಹಾರಾಜ ಗುಲಾಬ್ ಸಿಂಗ್ ನಿರ್ಮಿಸಿದರು. ಇಲ್ಲಿಗೆ ಆಗಮಿಸುವ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಮಹಾರಾಜ ಗುಲಾಬ್ ಸಿಂಗ್ ಅವರು ರಘುನಾಥ ದೇವಾಲಯದ ನಿರ್ಮಾಣಕ್ಕಾಗಿ ರಾಮದಾಸ್ ವೈರಾಗಿ ಅವರಿಂದ ಭವಿಷ್ಯವಾಣಿಯನ್ನು ಸ್ವೀಕರಿಸಿದ್ದರಂತೆ, ನಂತರ ಅದು ನಿಜವಾಗಿದೆ. ರಾಮದಾಸರು ಭಗವಾನ್ ಶ್ರೀರಾಮನ ಭಕ್ತರಾಗಿದ್ದರು. ಭಗವಾನ್ ರಾಮನ ಆದರ್ಶಗಳನ್ನು ಪ್ರಚಾರ ಮಾಡಲು ಅವರು ಅಯೋಧ್ಯೆಯಿಂದ ಜಮ್ಮುವಿಗೆ ಬಂದರು. ರಾಮದಾಸ್ ಅವರು ಸುಯಿ ಸಿಂಬ್ಲಿಯಲ್ಲಿ ಮೊದಲ ರಾಮ ಮಂದಿರವನ್ನು ನಿರ್ಮಿಸಿದ್ದರು.

ದೇವಾಲಯದ ವಿಶೇಷತೆ

ದೇವಾಲಯದ ಒಳಗೆ ಮೂರು ಗೋಡೆಗಳನ್ನು ಚಿನ್ನದ ಹಾಳೆಗಳಿಂದ ಮುಚ್ಚಲಾಗಿದೆ. ದೇವಾಲಯದ ಮುಖ್ಯ ಬಾಗಿಲು ಬೆಳ್ಳಿಯಿಂದ ಮಾಡಲ್ಪಟ್ಟಿದೆ. ದೇವಾಲಯದಲ್ಲಿ ಶಾಲೆ ಮತ್ತು ಗ್ರಂಥಾಲಯವೂ ಇದೆ. ಭಾರತೀಯ ಭಾಷೆಗಳಲ್ಲಿ 6,000 ಕ್ಕೂ ಹೆಚ್ಚು ಹಸ್ತಪ್ರತಿಗಳಿವೆ. ದೇವಾಲಯದ ಹೊರಗೆ ಐದು ಕಲಶಗಳು ಗೋಚರಿಸುತ್ತವೆ. ತಾಯಿ ಸೀತೆ, ಭಗವಾನ್ ಶ್ರೀರಾಮನ ಜೊತೆಗೆ ಲಕ್ಷ್ಮಣನ ಬೃಹತ್ ವಿಗ್ರಹವಿದೆ. ದೇವಸ್ಥಾನದಲ್ಲಿ ನಾಲ್ಕು ಧಾಮಗಳ ದರ್ಶನಕ್ಕೆ ಅವಕಾಶವಿರುವ ಕೋಣೆಯನ್ನೂ ನಿರ್ಮಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...