ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಮೂಲಂಗಿ ತುರಿ ಮುಕ್ಕಾಲು ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಸಾಸಿವೆ ಅರ್ಧ ಚಮಚ, ಜೀರಿಗೆ 1 ಚಮಚ, ಅಚ್ಚ ಖಾರದ ಪುಡಿ ಅರ್ಧ ಚಮಚ, ಎಣ್ಣೆ 2 ಚಮಚ.
ತಯಾರಿಸುವ ವಿಧಾನ: ಗೋಧಿ ಹಿಟ್ಟಿಗೆ ಉಪ್ಪನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟನ್ನು ಕಲೆಸಿಕೊಳ್ಳಿ. ಕಲೆಸಿದ ಹಿಟ್ಟನ್ನು ಹತ್ತು ನಿಮಿಷ ನೆನೆಯಲು ಬಿಡಿ. ಕಾದ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಹಾಕಿ ಸಿಡಿಸಿ. ಜೀರಿಗೆ ಕರಿಬೇವು ಹಾಕಿ ಅದಕ್ಕೆ ಮೂಲಂಗಿ ತುರಿಯನ್ನು ಸೇರಿಸಿ. ಉಪ್ಪು, ಅಚ್ಚ ಖಾರದ ಪುಡಿ ಹಾಕಿ ತಿರುಗಿಸಿ ಕೆಳಗಿಳಿಸಿ. ಸ್ವಲ್ಪ ತಣಿಸಿದ ಬಳಿಕ ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
ಕಲೆಸಿದ ಚಪಾತಿ ಹಿಟ್ಟಿನಿಂದ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಚಪಾತಿ ಲಟ್ಟಿಸಿ ಅದರ ಮಧ್ಯಕ್ಕೆ ಮೂಲಂಗಿ ಮಿಶ್ರಣದ ಉಂಡೆಯನ್ನಿಟ್ಟು ಮಡಚಿ ನಿಧಾನವಾಗಿ ಲಟ್ಟಿಸಿ. ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ಎರಡೂ ಬೇಯಿಸಿದರೆ ಬಿಸಿಯಾದ ಮೂಲಂಗಿ ಪರೋಟ ಸವಿಯಲು ಸಿದ್ದ.