ಬೆಂಗಳೂರು: ಮೂಗರು ಬಳಸುವ ಸನ್ನೆಯನ್ನು ಅಶ್ಲೀಲವಾಗಿ ತೋರಿಸಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಎಫ್ಎಂ ರೇಡಿಯೋ ಜಾಕಿ ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ. ವಿದ್ಯಾವಂತ ಯುವರಾಜಕಾರಣಿಗಳ ಅಣಕಿಸುವ ಭರದಲ್ಲಿ ಮೂಗರು ಬಳಸುವ ಸನ್ನೆಯನ್ನು ಅಶ್ಲೀಲವಾಗಿ ತೋರಿಸಿದ್ದಾರೆ. ರೋಹನ್ ಹಿಂದಿಯಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ್ದು, ಶರವಣ ಅದನ್ನು ಸನ್ನೆಯಲ್ಲಿ ತೋರಿಸಿದ್ದ. ವಿಡಿಯೋ ವೈರಲ್ ಆಗಿ ದೆಹಲಿಯಲ್ಲಿ ಹಲವು ಸಂಘಟನೆಗಳು ದೂರು ದಾಖಲಿಸಿದ್ದು, ಆರೋಪಿಗಳು ಬೆಂಗಳೂರಿನಲ್ಲಿರುವುದು ಗೊತ್ತಾಗಿ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಸಿಸಿಬಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೇಡಿಯೋ ಜಾಕಿ ರೋಹನ್ ಕಾರಿಯಪ್ಪ ಮತ್ತು ಶರವಣ ಅವರನ್ನು ಬಂಧಿಸಲಾಗಿದೆ.