ಬೆಂಗಳೂರು: ವಾಲ್ಮೀಕಿ ನಿಗಮದ ಬಳಿಕ ಇದೀಗ ಮುಡಾದಲ್ಲಿಯೂ ಅಕ್ರಮ ಬೆಳಕಿಇಗೆ ಬಂದಿದೆ. ಮುಡಾದಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದ್ದು, ರಾಜ್ಯ ಸರ್ಕಾರಿ ಲೂಟಿ ಮಾಡುವುದಲ್ಲಿ ನಿರತವಾಗಿದೆ ಎಂದು ವಿಪಕ್ಷ ನಯಾಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರ್ರಒಂದಿಗೆ ಮಾತನಾಡಿದ ವಿಪಕ್ಷ ನಯಾಕ ಆರ್.ಅಶೋಕ್, ವಾಲ್ಮಿಕಿ ನಿಗಮದ ಅಕ್ರಮ ಪ್ರಕರಣ ಸಂಬಂಧ ನಾವು ಹೋರಾಟ ಮಾಡಿದ್ದಕ್ಕೇ ಸಚಿವರು ರಾಜೀನಾಮೆ ಕೊಟ್ಟರು. ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರ ಇದೇ ರೀತಿ ಬೇರೆ ಬೇರೆ ಹಗರಣಗಳಲ್ಲಿ ಭಾಗಿಯಾಗಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಮುಡಾ ಅಕ್ರಮ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ನಮ್ಮನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಕೆಫೆ ಬ್ಲಾಸ್ಟ್ ಮಡಿದವರನ್ನು ಹಿಡಿಯಲು ಸರ್ಕಾರ ಪೊಲೀಸರನ್ನು ಬಿಡಲಿಲ್ಲ. ನಮ್ಮನ್ನು ಹಿಡಿಯಲು ನೂರಾರು ಪೊಲೀಸರನ್ನು ಬಿಟ್ಟಿದ್ದಾರೆ. ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.