![](https://kannadadunia.com/wp-content/uploads/2024/02/304aa1cb-ad06-4532-bbb9-9dfa39a02ce5-1024x759.jpg)
ಸ್ಯಾಂಡಲ್ವುಡ್ನ ಯುವ ನಟಿ ನಿಮಿಕಾ ರತ್ನಾಕರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ನಿಮಿಕಾ ರತ್ನಾಕರ್ ತಮ್ಮ ಕುಟುಂಬದೊಂದಿಗೆ ಹಂಪಿ ದೇವಾಲಯಕ್ಕೆ ತೆರಳಿದ್ದು, ತಮ್ಮ ಫೋಟೋಗಳನ್ನು ಒಂದೊಂದಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ”ಕುಟುಂಬ ಸಮೇತ ಹಂಪಿ ಪ್ರವಾಸ ಎಂತಹ ಅವಿಸ್ಮರಣೀಯ ಹಂಪಿಯಲ್ಲಿ ಪ್ರದರ್ಶನ ನೀಡುವುದು ಕನಸಿನ ಸಾಕಾರ ಕ್ಷಣ” ಎಂದು ಬರೆದುಕೊಂಡಿದ್ದಾರೆ.
‘ಅಬ್ಬರ’, ‘ಮಿಸ್ಟರ್ ಬ್ಯಾಚುಲರ್’ ಸಿನಿಮಾದಲ್ಲಿ ಅಭಿನಯಿಸಿದ್ದ ನಿಮಿಕ ರತ್ನಾಕರ್ ವಿ ಹರಿಕೃಷ್ಣ ನಿರ್ದೇಶನದ ‘ಕ್ರಾಂತಿ’ ಚಿತ್ರದ ‘ಶೇಕ್ ಇಟ್ ಪುಷ್ಪವತಿ’ ಹಾಡಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಹೆಜ್ಜೆ ಹಾಕಿದ್ದರು. ನಿಮಿಕಾ ರತ್ನಾಕರ್ ಈ ಹಾಡಿನ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.
![](https://kannadadunia.com/wp-content/uploads/2024/02/1f02317c-dca9-4a84-85c8-6b7f9f6341be-581x1024.jpg)