
ಬೆಂಗಳೂರು : ಗ್ರಾಮೀಣ ಜನತೆಗೆ ತಮ್ಮ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಗಾಗಿ ವಿವಿಧ ಇಲಾಖೆಗಳಿಂದ ಹಲವಾರು ದಾಖಲೆಗಳು ಬೇಕಾಗುತ್ತವೆ. ಇವುಗಳನ್ನು ತ್ವರಿತವಾಗಿ ಒಂದೇ ಸೂರಿನಡಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಿರುವ ಕೇಂದ್ರವೇ ‘ಬಾಪೂಜಿ ಸೇವಾ ಕೇಂದ್ರ’.
ಪಂಚತಂತ್ರ, ನಾಡಕಛೇರಿ ತಂತ್ರಾಂಶ ಹಾಗೂ ಭೂಮಿ ತಂತ್ರಾಂಶಗಳನ್ನು ಸಮ್ಮಿಲನಗೊಳಸಿ ಗ್ರಾಮ ಪಂಚಾಯಿತಿಗಳು ಈ ಸೇವೆಯನ್ನು ನೀಡುತ್ತಿವೆ. ಈಗ ನೀಡುತ್ತಿರುವ 19 ಸೇವೆಗಳ ಜೊತೆಗೆ ಕಂದಾಯ ಇಲಾಖೆಯಿಂದ ಪಹಣಿ ಪತ್ರ ಒಳಗೊಂಡಂತೆ 40 ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲಾಗುತ್ತದೆ.ಇದರಿಂದ ಸಾರ್ವಜನಿಕರು ತಮ್ಮ ದಾಖಲೆಗಳಗಾಗಿ ಕಛೇರಿಯಿಂದ ಕಛೇರಿಗೆ ಅಲೆಯುವುದು ತಪ್ಪಿದೆ. ‘ಬಾಪೂಜಿ ಸೇವಾ ಕೇಂದ್ರ’ದಿಂದ ದೊರೆಯುವ ಸೇವೆಗಳು ಕೆಳಕಂಡಂತೆ ಇವೆ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 19 ಸೇವೆಗಳು
- ಕಟ್ಟಡಪರವಾನಗಿ
- ತೆರಿಗೆನಿರ್ಧರಣಾಪಟ್ಟವಿತರಣೆ
- ಕಟ್ಟಡಸ್ವಾಧೀನಪತ್ರ
- ಹೊಸನೀರಿನಸಂಪರ್ಕಕ್ಕಾಗಿಅರ್ಜಿ
- ವ್ಯಾಪಾರಪರವಾನಗಿವಿತರಣೆ(ಹೊಟೇಲ್‌ಮತ್ತುಅಂಗಡಿ)
6, ಕಾರ್ಖಾನೆಗೆ ಅನುಮತಿ ಪತ್ರ
7, ಜಾಹೀರಾತುಪರವಾನಗಿ
- ನೀರಿನಸಂಪರ್ಕಕಡಿತ
- ಕುಡಿಯುವನೀರಿನನಿರ್ವಹಣಿ(ಸಣ್ಣರಿಪೇರಿ)
- ಬೀದಿದೀಪಗಳನಿರ್ವಹಣೆ
- ಗ್ರಾಮನೈರ್ಮಲ್ಯನಿರ್ವಹಣೆ
13, ESCOMS ನಿರಾಕ್ಷೇಪಣಿಪತ್ರ
- ಮನರಂಜನಾಪರವಾನಗಿನೀಡಿಕೆ ( ಹೊಸ/ಹೆಚ್ಚುವರಿ/ಬದಲಾವಣೆ)
- ನಮೂನೆ 9/11 A-Form 9/11A
- ನಮೂನೆ 9/11 B-Form 9/118
- ರಸ್ತೆ ಅಗೆಯುವುದಕ್ಕಾಗಿ ಅನುಮತಿ
- ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿಯನ್ನು ಒದಗಿಸುವುದು
- ಅಕುಶಲ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವುದು








