alex Certify BIG NEWS:‌ ಮತ್ತಷ್ಟು ದುಬಾರಿಯಾಗಲಿದೆ ಆಸ್ತಿ; ಇನ್ನೆರಡು ವರ್ಷದಲ್ಲಿ ಈ ಕ್ಷೇತ್ರದಲ್ಲಾಗಲಿದೆ ಮಹತ್ವದ ಬೆಳವಣಿಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಮತ್ತಷ್ಟು ದುಬಾರಿಯಾಗಲಿದೆ ಆಸ್ತಿ; ಇನ್ನೆರಡು ವರ್ಷದಲ್ಲಿ ಈ ಕ್ಷೇತ್ರದಲ್ಲಾಗಲಿದೆ ಮಹತ್ವದ ಬೆಳವಣಿಗೆ…!

ಗಳಿಸಿದ ಹಣದಲ್ಲಿ ಅರ್ಧ ಭಾಗವನ್ನು ಹೂಡಿಕೆ ಮಾಡ್ಬೇಕು ಎಂದು ತಜ್ಞರು ಹೇಳ್ತಾರೆ. ಈಗಿನ ದಿನಗಳಲ್ಲಿ ಯುವಕರು ಹೂಡಿಕೆಗೆ ಮುಂದೆ ಬರ್ತಿದ್ದಾರೆ. ನೀವೂ ರಿಯಲ್‌ ಎಸ್ಟೇಟ್‌ ವಿಭಾಗದಲ್ಲಿ ಹಣ ಹೂಡಿಕೆ ಮಾಡುವ ಆಲೋಚನೆ ಮಾಡ್ತಿದ್ದರೆ ಅದರ ಬಗ್ಗೆ ತಿಳಿದುಕೊಳ್ಳಿ. ಮುಂದಿನ ಕೆಲ ತಿಂಗಳಲ್ಲಿ ಈ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ.

ಮುಂದಿನ 12 ರಿಂದ 24 ತಿಂಗಳುಗಳಲ್ಲಿ ರಿಯಲ್‌ ಎಸ್ಟೇಟ್‌ ನಲ್ಲಿ ದೊಡ್ಡ ಹೂಡಿಕೆಯನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ತಜ್ಞರು. ಶೇಕಡಾ 71 ಶ್ರೀಮಂತ ಭಾರತೀಯರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದು, ಆಸ್ತಿ ಬೆಲೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಇಂಡಿಯಾ ಸೋಥೆಬೈಸ್ ಇಂಟರ್‌ನ್ಯಾಶನಲ್ ರಿಯಾಲ್ಟಿಯ ಐಷಾರಾಮಿ ಔಟ್‌ಲುಕ್ ಸಮೀಕ್ಷೆ 2024ನ್ನು ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು ಹಾಗೂ ಅಲ್ಟ್ರಾ ಹೈ-ನೆಟ್ ವರ್ತ್ ಹೊಂದಿರುವ ವ್ಯಕ್ತಿಗಳು ರಿಯಲ್‌ ಎಸ್ಟೇಟ್ ನಲ್ಲಿ ಹಣ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರ್ಷ ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ಹಾಗಾದಲ್ಲಿ ಜನರು ಹೆಚ್ಚಿನ ಆಸ್ತಿ ಖರೀದಿಗೆ ಆಸಕ್ತಿ ತೋರುತ್ತಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 56 ಮಂದಿ ಹೇಳಿದ್ದಾರೆ. ಭಾರತದಲ್ಲಿ ಶೇಕಡಾ 83ರಷ್ಟು ಭಾರತೀಯರು ಐಷಾರಾಮಿ ಆಸ್ತಿ ಹೊಂದಿದ್ದು, ಅದನ್ನು ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಶ್ರೀಮಂತರಲ್ಲಿ ಶೇಕಡಾ 35ರಷ್ಟು ಮಂದಿ ಹಾಲಿಡೆ ಹೋಮ್‌ ಖರೀದಿಗೆ ಆಸಕ್ತಿ ತೋರಿದ್ದು, ಗೋವಾ ಅವರ ಎರಡನೇ ಆಯ್ಕೆಯಾಗಿದೆ. ವಿದೇಶದಲ್ಲಿ ಸಂಪತ್ತು ಹೊಂದಬಯಸುವವರ ಸಂಖ್ಯೆ ಶೇಕಡಾ 12ರಷ್ಟಿದೆ. ಈಗ್ಲೇ ರಿಯಲ್‌ ಎಸ್ಟೇಟ್‌ ನಲ್ಲಿ ಹಣ ಹೂಡಿದ್ರೆ ಭವಿಷ್ಯದಲ್ಲಿ ಒಳ್ಳೆಯ ಲಾಭಪಡೆಯಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...