ನಿನ್ನೆ ನಡೆದ ಪ್ರೊ ಕಬಡ್ಡಿ ಸೆಮಿ ಫೈನಲ್ ಪಂದ್ಯಗಳು ರೋಚಕತೆಯಿಂದ ಸಾಗಿದ್ದು, ಯುಪಿ ಯೋಧಾಸ್ ಮತ್ತು ದಬಾಂಗ್ ಡೆಲ್ಲಿ ತಂಡ ಕೆಲವೇ ಅಂತರಗಳಿಂದ ಸೋಲು ಕಂಡಿದ್ದು, ಫೈನಲ್ ಗೆ ಬರುವ ಅವಕಾಶವನ್ನು ಕಳೆದುಕೊಂಡಿವೆ. ಈ ಮೂಲಕ ಹರಿಯಾಣ ಸ್ಟೀಲರ್ಸ್ ಹಾಗೂ ಪಟ್ನಾ ಪೈರೇಟ್ಸ್ ಫೈನಲ್ ಗೆ ಲಗ್ಗೆ ಇಟ್ಟಿವೆ.
ಪಟ್ನಾ ಪೈರೇಟ್ಸ್ ತಂಡ ಪ್ರೊ ಕಬಡ್ಡಿಯಲ್ಲಿ ಇದುವರೆಗೂ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದು, ಮತ್ತೊಮ್ಮೆ ಚಾಂಪಿಯನ್ ಆಗುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ಹರಿಯಾಣ ಸ್ಟೀಲರ್ಸ್ ತಂಡ ಲೀಗ್ ಹಂತದ ಪಾಯಿಂಟ್ ಟೇಬಲ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಾರಾಜಿಸಿದ್ದು, ಈ ಬಾರಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
ನಾಳೆಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮನರಂಜನೆಯ ರಸದೌತಣ ಪಡೆದುಕೊಳ್ಳಲು ಕಬಡ್ಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.