ಚೆನ್ನೈನಲ್ಲಿನ ಕಬಡ್ಡಿ ಪಂದ್ಯಗಳು ಇಂದಿಗೆ ಮುಕ್ತಾಯವಾಗಲಿದ್ದು, ಇಂದು ಮೊದಲ ಪಂದ್ಯದಲ್ಲೇ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಡಿಪೆಂಡಿಂಗ್ ಚಾಂಪಿಯನ್, ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ದಬಾಂಗ್ ಡೆಲ್ಲಿ ಕೆ ಸಿ ಮುಖಮುಖಿಯಾಗಲಿವೆ. ದಬಾಂಗ್ ಡೆಲ್ಲಿ ಪ್ರಮುಖ ರೈಡರ್ ನವೀನ್ ಎಕ್ಸ್ಪ್ರೆಸ್ ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಈಗಾಗಲೇ ಮೂರು ಸೂಪರ್ ಟೆನ್ ಗಳಿಸಿದ್ದು, ಮೊನ್ನೆ ಅಷ್ಟೇ ಸಾವಿರ ರೈಡ್ ಪಾಯಿಂಟ್ ಗಳ ಗಡಿ ಮುಟ್ಟಿದ್ದಾರೆ.
ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ದಬಾಂಗ್ ಡೆಲ್ಲಿ ಮುಖಾಮುಖಿಯಾದರೆ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಗುಜರಾತ್ ಜೈಂಟ್ಸ್ ಹೊರಾಡಲಿದ್ದು, ತಮಿಳ್ ತಲೈವಾಸ್ ತಂಡಕ್ಕೆ ಸಪೋರ್ಟ್ ಮಾಡಲು ಚೆನ್ನೈನಲ್ಲಿ ಪ್ರೇಕ್ಷಕರು ಇಂದು ಅಪಾರ ಸಂಖ್ಯೆಯಲ್ಲಿ ಸೇರಲಿದ್ದಾರೆ