
ಫೆಬ್ರುವರಿ 18 ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರ ವಿವಾಹ ವಾರ್ಷಿಕೋತ್ಸವವಾಗಿದ್ದು, ಪತಿಗೆ ಪ್ರಿಯಾಂಕಾ ಶುಭ ಹಾರೈಸಿದ್ದಾರೆ.
ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅವರು, 38 ವರ್ಷಗಳ ಹಿಂದೆ ಹೇಗೆ ಭೇಟಿಯಾಗಿದ್ದೆವು ಮತ್ತು ಇನ್ನೂ ಹೇಗೆ ಪ್ರೀತಿಯಿಂದ ಬಾಳುತ್ತಿದ್ದೇವೆ ಎನ್ನುವುದನ್ನು ಶೇರ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರ ಎರಡು ಸೆಲ್ಫಿಗಳಿವೆ. ದಂಪತಿಗಳು ಒಂದು ಕಪ್ ಬಿಸಿ ಪಾನೀಯದೊಂದಿಗೆ ನಿಂತಿದ್ದಾರೆ. “ನಾವು ಮೊದಲು ಭೇಟಿಯಾಗಿದ್ದು 38 ವರ್ಷ ಹಿಂದೆ, ಮದುವೆಯಾಗಿ 26 ವರ್ಷಗಳಾಗಿದೆ. ಈಗಲೂ ಪರಸ್ಪರ ನಗುವಿನ ಜೊತೆ ಬಾಳುತ್ತಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಪ್ರಿಯಾಂಕಾ ಅಭಿಮಾನಿಗಳು ದಂಪತಿಯನ್ನು ಅಭಿನಂದಿಸಿ ಶುಭ ಹಾರೈಸುತ್ತಿದ್ದಾರೆ. 1997ರಲ್ಲಿ ಪ್ರಿಯಾಂಕಾ ಗಾಂಧಿ ಅವರು ರಾಬರ್ಟ್ ವಾದ್ರಾ ಅವರನ್ನು ವಿವಾಹವಾದರು. ಅವರಿಗೆ ಮಿರಾಯಾ ಮತ್ತು ರೈಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅವರು ಕಳೆದ ವರ್ಷ ತಮ್ಮ ವಿವಾಹದ ಬೆಳ್ಳಿ ಮಹೋತ್ಸವವನ್ನು (25 ವರ್ಷ) ಆಚರಿಸಿಕೊಂಡಿದ್ದರು.
