ಖಾಸಗಿ ವಿವಿಗಳು ವೃತ್ತಿಪರ ಕೋರ್ಸ್ ಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ: ಉನ್ನತ ಶಿಕ್ಷಣ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜ್ಯದ ಖಾಸಗಿ ವಿವಿಗಳು ವೃತ್ತಿಪರ ಕೋರ್ಸ್ ಗಳಿಗೆ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಹಾಲಿ ವಿವಿಗಳು ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಸೇರಿ ನಾನಾ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸರ್ಕಾರಿ ಕೋಟಾ ಹೊರತುಪಡಿಸಿದ ಸೀಟುಗಳಿಗೆ ತಮ್ಮದೇ ಪ್ರವೇಶ ಪರೀಕ್ಷೆ ನಡೆಸದಂತೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಸರ್ಕಾರ, ಶಿಕ್ಷಣ ಸಂಸ್ಥೆಗಳ ಒಕ್ಕೂಟ, ವಿವಿಧ ಪ್ರಾಧಿಕಾರಗಳು ನಡೆಸುವ ಸಿಇಟಿ, ಕಾಮೆಡ್ –ಕೆ, ಜೆಇಇ, ಗೇಟ್ ಪರೀಕ್ಷೆಗಳನ್ನು ಮಾತ್ರ ಪ್ರವೇಶಕ್ಕೆ ಮಾನದಂಡವಾಗಿ ಪರಿಗಣಿಸಲು ಸೂಚಿಸಿದ್ದು, ಇದಕ್ಕೆ ಖಾಸಗಿ ವಿವಿಗಳು ಒಪ್ಪಿವೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ವೃತ್ತಿಪರ ಕೋರ್ಸ್ ಗಳನ್ನು ನಡೆಸುತ್ತಿರುವ ರಾಜ್ಯದ 17 ಖಾಸಗಿ ವಿವಿಗಳು ಸರ್ಕಾರದ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದೆ. 2024- 25 ಸಾಲಿನ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, 2025 -26 ನೇ ಸಾಲಿನಿಂದ ಇದು ಜಾರಿಗೆ ಬರಲಿದೆ.

ಸರ್ಕಾರ, ಶಿಕ್ಷಣ ಸಂಸ್ಥೆಗಳ ಒಕ್ಕೂಟ, ವಿವಿಧ ಪ್ರಾಧಿಕಾರಗಳು ನಡೆಸುವ ಸಿಇಟಿ, ಕಾಮೆಡ್ –ಕೆ, ಜೆಇಇ, ಗೇಟ್ ಪರೀಕ್ಷೆಗಳನ್ನು ಮಾತ್ರ ಪ್ರವೇಶಕ್ಕೆ ಮಾನದಂಡವಾಗಿ ಖಾಸಗಿ ವಿವಿಗಳು ಪರಿಗಣಿಸಬೇಕು. ಯಾವ ಪರೀಕ್ಷಾ ಫಲಿತಾಂಶ ಪರಿಗಣಿಸುತ್ತೇವೆ ಎಂದು ನಿರ್ಧರಿಸಿ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read