ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದಂತೆ ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ. ಸಾಮಾನ್ಯ ದಿನದ ಟಿಕೆಟ್ ದರಕ್ಕಿಂತ ಹೆಚ್ಚು ದರ ಸಂಗ್ರಹ ಮಾಡಬಾರದು. ಹೆಚ್ಚಿನ ದರ ಸಂಗ್ರಹ ಮಾಡಿದರೆ ವಾಹನ ಮಾಲೀಕರ ಲೈಸನ್ಸ್, ನೋಂದಣಿ ಪತ್ರ ಅಮಾನತು ಮಾಡಲಾಗುವುದು.
ಖಾಸಗಿ ಬಸ್ ಗಳು ಹೆಚ್ಚಿನ ಟಿಕೆಟ್ ದರ ಪಡೆದುಕೊಂಡಲ್ಲಿ ಪ್ರಯಾಣಿಕರು ದೂರು ನೀಡಲು ಮನವಿ ಮಾಡಲಾಗಿದೆ.
ಹೆಲ್ಪ್ ಲೈನ್: 94498 63429, 94498 63426 ಗೆ ಕರೆ ಮಾಡುವಂತೆ ಪ್ರಯಾಣಿಕರಿಗೆ ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದೆ.