ಹುಬ್ಬಳ್ಳಿ: ಜುಲೈ 15 ರಿಂದ ಮುಂಬೈ -ಹುಬ್ಬಳ್ಳಿ ಇಂಡಿಗೋ ವಿಮಾನಯಾನ ಪುನಾರಂಭಿಸಲು ವಿಮಾನಯಾನ ಸಚಿವಾಲಯ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆಗೆ ಇಂಡಿಗೋ ನಿರ್ವಹಣಾ ಸಮಿತಿಯು ವಿಮಾನ ಸಂಚಾರ ಪುನಾರಂಭಿಸಲು ಕ್ರಮ ಕೈಗೊಂಡಿದೆ. ಮುಂಬೈ – ಹುಬ್ಬಳ್ಳಿ – ಮುಂಬೈ ನಡುವಿನ ಇಂಡಿಗೋ 6ಇ ವಿಮಾನ ಸಂಚಾರದ ಸೇವೆಯನ್ನು ಪುನರಾರಂಭಿಸುತ್ತಿದೆ.
ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಮಾಹಿತಿ ನೀಡಿದ್ದು, ಜುಲೈ 15 ರಿಂದ ಮುಂಬೈ-ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇಂಡಿಗೋ ವಿಮಾನ ಮಧ್ಯಾಹ್ನ 3 ಗಂಟೆಗೆ ಮುಂಬೈನಿಂದ ಹೊರಟು ಸಂಜೆ 4:10ಕ್ಕೆ ಹುಬ್ಬಳ್ಳಿ ತಲುಪಲಿದೆ. ಸಂಜೆ 4.40ಕ್ಕೆ ಹುಬ್ಬಳ್ಳಿಯಿಂದ ಹೊರಟು 5.50ಕ್ಕೆ ಮುಂಬೈ ತಲುಪಲಿದೆ.
.@IndiGo6E ನಿರ್ವಹಣಾ ಸಮಿತಿಯು ನನ್ನ ಪ್ರಸ್ತಾವನೆಯ ಮೇರೆಗೆ ಮುಂಬೈ – ಹುಬ್ಬಳ್ಳಿ – ಮುಂಬೈ ನಡುವಿನ ತಮ್ಮ ವಿಮಾನ ಸಂಚಾರದ ಸೇವೆಯನ್ನು ಪುನರಾರಂಭಿಸುತ್ತಿದೆ. ಜುಲೈ 15 ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ.
ನಮ್ಮ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಸಹಕರಿಸಿದ್ದಕ್ಕಾಗಿ @MoCA_GoI ಹಾಗೂ @IndiGo6E ನಿರ್ವಹಣಾ…
— Pralhad Joshi (@JoshiPralhad) June 19, 2024