ನಿಮ್ಮ ಮನೆಯನ್ನು ನೀವು ಸರಿ ಪಡಿಸಿಕೊಳ್ಳಿ; ಜಗಳದಿಂದ ಸರ್ಕಾರ ಅಸ್ಥಿರವಾದರೆ ನಾವು ಕಾರಣರಲ್ಲ; ಪ್ರಹ್ಲಾದ್ ಜೋಶಿ ಎಚ್ಚರಿಕೆ

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತೆಗೆಯುವ ಯಾವುದೇ ಉದ್ದೇಶ ನಮಗಿಲ್ಲ. ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಬಂದಿದೆ. ಹಾಗಾಗಿ ಅವರು ಶುದ್ಧರಾಗಿ ಹೊರಗೆ ಬರಲಿ ಎಂಬುದಷ್ಟೇ ನಮ್ಮ ಹೇಳಿಕೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜ್ಯಪಾಲರ ಮೂಲಕವಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನ ನಡೆಸಿದೆ ಎಂಬ ಆರೋಪವನ್ನು ನಿರಾಕರಿಸಿದರು. ನಮ್ಮಿಂದ ಸರ್ಕಾರ ಅಸ್ಥಿರವಾಗುವುದಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವೂ ನಮಗಿಲ್ಲ. ಆದರೆ ನಿಮ್ಮ ನಿಮ್ಮ ಜಗಳದಿಂದ ಸರ್ಕಾರ ಅಸ್ಥಿರವಾದರೆ ನಾವು ಕಾರಣರಲ್ಲ ಎಂದು ಹೇಳಿದರು.

ಬೇರೆಯವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮೊದಲು ನಿಮ್ಮ ಮನೆಯನ್ನು ನೀವು ಸರಿ ಪಡಿಸಿಕೊಳ್ಳಿ. ಬಿಜೆಪಿ ಯಾವ ಕಾರಣಕ್ಕೂ ಸರ್ಕಾರವನ್ನು ತೆಗೆಯುವ ಉದ್ದೇಶ ಹೊಂದಿಲ್ಲ. ನಮಗೆ ವಿಪಕ್ಷದಲ್ಲಿದ್ದು ಕೆಲಸ ಮಾಡಲು ಜನಾದೇಶ ನೀಡಿದ್ದಾರೆ. ನಾವು ಆ ಕೆಲಸ ಮಾಡುತ್ತಿದ್ದೇವೆ. ಸಿಎಂ ವಿರುದ್ಧ ಆರೋಪ ಕೇಳಿಬಂದಿದೆ. ಅವರು ಶುದ್ಧರು ಎಂಬುದು ಸಾಬೀತಾಗಲಿ. ಪಾರದರ್ಶಕ ತನಿಖೆಯಾಗಲಿ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read