BIG NEWS: ಪ್ರಕಾಶ್ ರಾಜ್ ಒಬ್ಬ ಅಸಂತುಷ್ಠ ಜೀವಿ; ರಾಜಕಾರಣದಲ್ಲಿ ಅವರ ಸ್ಥಾನಮಾನವೇನು?; ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿರುವ ನಟ, ನಿರ್ದೇಶಕ ಪ್ರಕಾಶ್ ರಾಜ್ ವಿರುದ್ಧ ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಸಿನಿಮಾ ನಟ ಪ್ರಕಾಶ್ ರಾಜ್ ಅವರ ಮಾತುಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಡಿದ ಪ್ರಹ್ಲಾದ್ ಜೋಶಿ, ಪ್ರಕಾಶ್ ರಾಜ್ ಒಬ್ಬ ಅಸಂತುಷ್ಠ ಜೀವಿ ಅಥವಾ ವಿಘ್ನ ಸಂತೋಷಿ. ರಾಜಕಾರಣದಲ್ಲಿ ಅವರ ಸ್ಥಾನಮಾನ ಏನು? ಅವರಾಗಲಿ, ಕಮಲ್ ಹಾಸನ್ ಅವರಾಗಲಿ ಒಂದೇ ಒಂದು ಸೀಟು ಗೆಲ್ಲಲಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಕಾಶ್ ರಾಜ್ ಮಾಡುವ ಆರೋಪಗಳಲ್ಲಿ ಕಿಂಚಿತ್ತಾದರೂ ಸತ್ಯಾಂಶವಿದ್ದರೆ ಇಂದು ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸಂಸದರ ಆದರ್ಶ ಗ್ರಾಮದ ಬಗ್ಗೆ ಪರಿಕಲ್ಪನೆಯೂ ಇಲ್ಲದವರು ಅದರ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ ಎಂದು ಗುಡುಗಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read