ಪಿಪಿಎಫ್ ಚಂದಾದಾರರಿಗೆ ಭರ್ಜರಿ ಗುಡ್ ನ್ಯೂಸ್ ಒಂದು ಇಲ್ಲಿದೆ. 2020ರ ಏಪ್ರಿಲ್ ನಿಂದ ಯಥಾ ಸ್ಥಿತಿಯಲ್ಲಿ ಮುಂದುವರೆದಿದ್ದ ಪಿಪಿಎಫ್ ಬಡ್ಡಿದರ ಈ ಬಾರಿ ಏರಿಕೆಯಾಗುವ ನಿರೀಕ್ಷೆ ಇದೆ.
ಜೂನ್ 30ರ ಇಂದು ಪಿಪಿಎಫ್, ಕಿಸಾನ್ ವಿಕಾಸ ಪತ್ರ, ಸುಕನ್ಯಾ ಸಮೃದ್ಧಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಿಷ್ಕರಣೆಯಾಗುತ್ತಿದ್ದು, ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ.
2020 ರ ಏಪ್ರಿಲ್ ನಿಂದ ಪಿಪಿಎಫ್ ಗೆ ಶೇಕಡ 7.1ರ ಬಡ್ಡಿ ದರವೇ ಮುಂದುವರೆದಿದ್ದು, ಇದನ್ನು ಏರಿಕೆ ಮಾಡುವ ನಿರೀಕ್ಷೆ ಇದೆ. ರೆಪೋ ದರ ಗಣನೀಯವಾಗಿ ಏರಿಕೆ ಕಂಡಿದ್ದರೂ ಸಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ನಿರೀಕ್ಷಿತ ಮಟ್ಟದಲ್ಲಿ ಬ್ಯಾಂಕುಗಳು ಹೆಚ್ಚಳ ಮಾಡಿರಲಿಲ್ಲ. ಇದೀಗ ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.