
ಶಿವಮೊಗ್ಗ: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾ ಗಾಂಧಿ ಇತ್ತೀಚೆಗೆ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಉದ್ಯಮಿ ವಿಜಯ್ ಗೋರ್ಪಡೆ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹತ್ತು ವರ್ಷಗಳಿಂದ ವಿಜಯ್ ಹಾಗೂ ಪೂಜಾ ಸ್ನೇಹಿತರಾಗಿದ್ದರು. ವಿಜಯ್ ಅವರಿಂದಲೇ ಪೂಜಾ ಗಾಂಧಿ ಕನ್ನಡ ಕಲಿತಿದ್ದಾರೆ ಎನ್ನಲಾಗಿದೆ. ಯಲಹಂಕದ ಖಾಸಗಿ ಹೋಟೆಲ್ ನಲ್ಲಿ ಇತ್ತೀಚೆಗೆ ಪೂಜಾ ಗಾಂಧಿ ಹಾಗೂ ವಿಜಯ್ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಬಳಿಕ ದಂಪತಿ ರಾಷ್ಟ್ರಕವಿ ಕುವೆಂಪು ಹುಟ್ಟೂರಾದ ಕುಪ್ಪಳ್ಳಿಗೆ ಭೇಟಿ ನೀಡಿರುವುದು ವಿಶೇಷ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಗೆ ಭೇಟಿ ನೀಡಿರುವ ಪೂಜಾ ಗಾಂಧಿ ಹಾಗೂ ವಿಜಯ್, 150 ವರ್ಷಗಳಷ್ಟು ಹಳೆಯದಾದ ಕುವೆಂಪು ಅವರ ಕವಿಮನೆ, ಕೈವಿಶೈಲ, ಶತಮಾನೋತ್ಸವ ಭವನ, ಕಲಾನಿಕೇತನ, ಕುವೆಂಪು ಸ್ಮಾರಕ ಅರಣ್ಯ, ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿದ್ದಾರೆ.
ಪತಿಯೊಂದಿಗೆ ಕುಪ್ಪಳ್ಳಿಗೆ ಭೇಟಿ ನೀಡಿದ ಸುಂದರ ಕ್ಷಣಗಳನ್ನು ಪೂಜಾ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.