ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಸಿರ್‌ಹತ್ ನ ಬಿಜೆಪಿ ಅಭ್ಯರ್ಥಿ ಮತ್ತು ಸಂದೇಶಖಾಲಿ ಸಂತ್ರಸ್ತರಲ್ಲಿ ಒಬ್ಬರಾದ ರೇಖಾ ಪಾತ್ರ ಅವರೊಂದಿಗೆ ಫೋನ್ ನಲ್ಲಿ ಮಾತನಾಡಿದ್ದಾರೆ.
ಪ್ರಚಾರದ ಸಿದ್ಧತೆಗಳು ಮತ್ತು ಬಿಜೆಪಿಗೆ ಜನರ ಬೆಂಬಲದ ಬಗ್ಗೆ ಪ್ರಧಾನಿ ಅವರೊಂದಿಗೆ ರೇಖಾ ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಅಲ್ಲದೇ, ರೇಖಾ ಪಾತ್ರಾ ಅವರು ದೂರವಾಣಿ ಸಂಭಾಷಣೆಯ ಸಮಯದಲ್ಲಿ ಸಂದೇಶಖಾಲಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಅಗ್ನಿಪರೀಕ್ಷೆಗಳನ್ನು ಹಂಚಿಕೊಂಡಿದ್ದಾರೆ. ಫೋನ್ ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಅವರನ್ನು “ಶಕ್ತಿ ಸ್ವರೂಪಾ” ಎಂದೂ ಕರೆದರು.
ಟಿಎಂಸಿ ಮುಖಂಡ ಷಹಜಹಾನ್ ಶೇಖ್ ಅವರ ವಿರುದ್ಧ ಈ ವರ್ಷದ ಜನವರಿಯಲ್ಲಿ ಹಲವಾರು ಮಹಿಳೆಯರು ಪ್ರತಿಭಟನೆ ನಡೆಸಿದ್ದರು.