ಇಂದು ಬೆಳಗ್ಗೆ 11 ಗಂಟೆಗೆ ಮೋದಿ ‘ಮನ್ ಕಿ ಬಾತ್’ 100ನೇ ಕಂತು ಪ್ರಸಾರ: 4 ಲಕ್ಷ ಸ್ಥಳಗಳಲ್ಲಿ ಭಾಷಣ ಕೇಳಿಸಲು ವ್ಯವಸ್ಥೆ

ನವದೆಹಲಿ: ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

2014ರಲ್ಲಿ ಮೋದಿ ಪ್ರಧಾನಿಯಾದ ನಂತರ ರೇಡಿಯೋ ಭಾಷಣ ಆರಂಭಿಸಿದ್ದು, ಶತಕದ ಸಂಭ್ರಮ ಯಶಸ್ಸಿಗೆ ಬಿಜೆಪಿ ಸಕಲಸಿದ್ಧತೆ ಮಾಡಿಕೊಂಡಿದೆ. ದೇಶಾದ್ಯಂತ 4 ಲಕ್ಷ ಸ್ಥಳಗಳಲ್ಲಿ ಜನರಿಗೆ ಭಾಷಣ ಕೇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯೂಯಾರ್ಕ್ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿಯೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ತಿಂಗಳ ಕೊನೆಯ ಭಾನುವಾರ ಮೋದಿ ಅವರ ‘ಮನ್ ಕಿ ಬಾತ್’ ಹೆಸರಲ್ಲಿ ರೇಡಿಯೋ ಭಾಷಣ ಮಾಡುತ್ತಾರೆ. ಪ್ರತಿ ಭಾಷಣದಲ್ಲಿಯೂ ಒಂದೊಂದು ವಿಷಯ ಆಯ್ದುಕೊಳ್ಳುತ್ತಾರೆ. 100ನೇ ಕಂತಿನ ಭಾಷಣಕ್ಕಾಗಿ ಬಿಜೆಪಿ 4 ಲಕ್ಷ ಕಡೆ ಭಾಷಣ ಕೇಳಿಸಲು ವ್ಯವಸ್ಥೆ ಮಾಡಿಕೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ 100 ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read