ಸಿಯೋಲ್: 181 ಜನರಿದ್ದ ವಿಮಾನ ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಪತನಗೊಂಡಿದೆ.
ಕನಿಷ್ಠ 85 ಜನ ಸಾವನ್ನಪ್ಪಿದ್ದಾರೆ. ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಗೇರ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ನಂತರ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ತುರ್ತು ಕಚೇರಿ ತಿಳಿಸಿದೆ.
ಸುಮಾರು 181 ಜನರಿದ್ದ ವಿಮಾನ ಬ್ಯಾಂಕಾಕ್ನಿಂದ ಹಿಂತಿರುಗುತ್ತಿತ್ತು. ಬೆಂಕಿಯನ್ನು ನಂದಿಸಲಾಗಿದೆ. ರಕ್ಷಣಾ ಅಧಿಕಾರಿಗಳು ದಕ್ಷಿಣ ಕೊರಿಯಾದ ನಗರವಾದ ಮುವಾನ್ ನಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಪ್ರಯಾಣಿಕರನ್ನು ಹೊರ ತರಲು ಪ್ರಯತ್ನಿಸುತ್ತಿದ್ದಾರೆ.
ಜೆಜು ಏರ್ ಫ್ಲೈಟ್ ವಿಮಾನವು ರನ್ವೇಯಿಂದ ದೂರ ಸರಿದು ಬೇಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ವಿಮಾನಕ್ಕೆ ಬೆಂಕಿ ತಗುಲಿದ್ದು, ಭಾರಿ ಸಾವು ನೋವುಗಳಿಗೆ ಕಾರಣವಾಗಿದೆ.