ಪಿಜ್ಜಾದ ಪ್ರೀತಿಗಾಗಿ ನೀವು ಎಷ್ಟು ದೂರ ಹೋಗಬಹುದು ? ಇಂಗ್ಲೆಂಡ್ನಿಂದ ಆಹಾರಪ್ರೇಮಿಯೊಬ್ಬ ಪಿಜ್ಜಾ ಊಟದಲ್ಲಿ ಹಣವನ್ನು ಉಳಿಸಲು ಇಟಲಿಗೆ ಪ್ರಯಾಣ ಬೆಳೆಸಿದ್ದಾನೆ ! ಇದನ್ನು ಕೇಳಿದರೆ ವಿಚಿತ್ರ ಎನಿಸಬಹುದು ಅಲ್ಲವೆ? ಈತನ ಕಥೆಯೇ ಕುತೂಹಲಕರವಾಗಿದೆ.
ಕ್ಯಾಲಮ್ ರಿಯಾನ್ ಎಂಬಾತ ಇಂಗ್ಲೆಂಡ್ನಿಂದ ಇಟಲಿಗೆ ಪಿಜ್ಜಾಕ್ಕಾಗಿ ಬಂದಿದ್ದಾನೆ. ಅವನು ಇರುವ ಪ್ರದೇಶದಲ್ಲಿ ಡೊಮಿನೊಸ್ ಪಿಜ್ಜಾ ಆರ್ಡರ್‌ನಲ್ಲಿ ಡೆಲಿವರಿ ಶುಲ್ಕ ತುಂಬಾ ಹೆಚ್ಚಿರುವುದನ್ನು ಗಮನಿಸಿದ ನಂತರ ಆತ ಇಟಲಿಯ ಪಿಜ್ಜಾ ಸವಿಯಲು ಹೀಗೆ ಮಾಡಿದ್ದಾನೆ!
ಪಿಜ್ಜಾ ದರ ಉಳಿಸಲು ವಿಮಾನಕ್ಕೆ ಅಷ್ಟು ಹಣ ಕೊಟ್ಟು ಬಂದ ಹುಚ್ಚ ಎಂದುಕೊಂಡರೆ ಅದು ನಿಮ್ಮ ತಪ್ಪು. ಏಕೆಂದರೆ, ರಿಯಾನ್ ಹಂಚಿಕೊಂಡ ಇನ್‌ಸ್ಟಾಗ್ರಾಮ್ ರೀಲ್ ಪ್ರಕಾರ, ವಿಮಾನ ಶುಲ್ಕವನ್ನು ಒಳಗೊಂಡಿದ್ದರೂ ಕಡಿಮೆ ವೆಚ್ಚದಲ್ಲಿ ಪಿಜ್ಜಾವನ್ನು ಆನಂದಿಸಿದ್ದಾನಂತೆ ! ಇದರ ದರಪಟ್ಟಿಯನ್ನೂ ಆತ ಶೇರ್ ಮಾಡಿಕೊಂಡಿದ್ದಾನೆ. ಈತ ಕೊಟ್ಟಿರುವ ಬಿಲ್ ನೋಡಿದರೆ ವಿಮಾನದ ಶುಲ್ಕವೇ ಪಿಜ್ಜಾಕ್ಕಿಂತ ಕಡಿಮೆ ಎಂದು ನೋಡಬಹುದು!