ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಲವರು ತೂಕ ನಷ್ಟಕ್ಕಾಗಿ ನಿಂಬೆ ನೀರನ್ನು ಕುಡಿಯುತ್ತಾರೆ. ಆದರೆ ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯಬೇಡಿ.
ಆ್ಯಸಿಡಿಟಿ ಸಮಸ್ಯೆ ಇರುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ನೀರನ್ನು ಕುಡಿಯಬೇಡಿ. ಇದರಲ್ಲಿ ಸಿಟ್ರಿಕ್ ಆಮ್ಲವಿರುವುದರಿಂದ ಇದು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ.
ಸೂಕ್ಷ್ಮ ಹಲ್ಲುಗಳ ಸಮಸ್ಯೆ ಇರುವವರು ನಿಂಬೆ ನೀರನ್ನು ಕುಡಿಯಬೇಡಿ. ನಿಂಬೆಯಲ್ಲಿರುವ ಆಮ್ಲ ಹಲ್ಲುಗಳ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಇದು ಹಲ್ಲುಗಳ ದಂತಕವಚವನ್ನು ದುರ್ಬಲಗೊಳಿಸುತ್ತದೆ.
ಹಾಗೇ ಮೂಳೆಗಳ ಸಮಸ್ಯೆಯಿಂದ ಬಳಲುತ್ತಿರುವವರು ನಿಂಬೆ ನೀರನ್ನು ಕುಡಿಯಬೇಡಿ. ಇದು ಮೂಳೆಗಳನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ.
ಹಾಗೇ ಕಿಡ್ನಿ ಸಮಸ್ಯೆ ಇರುವವರು ನಿಂಬೆ ನೀರಿನ ಸೇವನೆಯನ್ನು ತಪ್ಪಿಸಿ. ಇದು ಕಿಡ್ನಿಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಕಿಡ್ನಿಯನ್ನು ಹಾನಿಗೊಳಿಸುತ್ತದೆ.
ಹಾಗಾಗಿ ಈ ಸಮಸ್ಯೆಯಿಂದ ಬಳಲುತ್ತಿರವವರು ಅಪ್ಪಿತಪ್ಪಿಯೂ ನಿಂಬೆ ನೀರಿನ ಸೇವನೆಯಿಂದ ದೂರವಿರಿ. ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ.