ʼಸ್ಮಾರ್ಟ್ ಫೋನ್ʼ ಕೊಳ್ಳುವ ಮುನ್ನ ಈ ವಿಷಯದ ಕುರಿತು ಇರಲಿ ಗಮನ

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಸಂವಹನಕ್ಕೆ, ಫೋಟೋ ತೆಗೆಯಲು, ದಾಖಲೆಗಳನ್ನು ಸೇವ್ ಮಾಡಿಕೊಳ್ಳಲು, ಇಂಟರ್ನೆಟ್ ಬ್ರೌಸಿಂಗ್ ಗೆ, ಉಳಿದ ಸ್ಮಾರ್ಟ್ ಫೋನ್ ಗಳನ್ನು ಚಾರ್ಜ್ ಮಾಡಲು ಪವರ್ ಬ್ಯಾಂಕ್ ಆಗಿಯೂ ನಾವು ಅದನ್ನು ಬಳಸುತ್ತೇವೆ.

ಮಾರುಕಟ್ಟೆಯಲ್ಲಿ ನಾನಾ ಬಗೆಯ ಮೊಬೈಲ್ ಗಳು ಲಭ್ಯವಿರೋದ್ರಿಂದ ಯಾವುದನ್ನು ಕೊಂಡುಕೊಳ್ಳುವುದು ಅನ್ನೋ ಗೊಂದಲ ಸಹಜ. ಸ್ಮಾರ್ಟ್ ಫೋನ್ ಆಯ್ಕೆಗೆ ಕೆಲವು ಟಿಪ್ಸ್ ಇಲ್ಲಿದೆ.

ಬಿಲ್ಡ್ ಗುಣಮಟ್ಟ : ಬಿಲ್ಡ್ ಎಂದರೆ ಸ್ಮಾರ್ಟ್ ಫೋನ್ ನ ಬಾಳಿಕೆ. ಮಾರುಕಟ್ಟೆಯಲ್ಲಿ 2 ಬಗೆಯ ಬಿಲ್ಡ್ ಇದೆ – ಲೋಹ ಮತ್ತು ಪ್ಲಾಸ್ಟಿಕ್. ಗಾಜಿನಿಂದಾವೃತವಾದ ಪ್ಯಾನಲ್ ಗಳು ಕೂಡ ಸಿಗುತ್ತವೆ. ನಿಮಗೆ ಪದೇ ಪದೇ ಮೊಬೈಲ್ ಕೆಳಕ್ಕೆ ಬೀಳಿಸೋ ಅಭ್ಯಾಸವಿದ್ರೆ ಮೆಟಲ್ ಅಥವಾ ಪ್ಲಾಸ್ಟಿಕ್ ಹ್ಯಾಂಡ್ ಸೆಟ್ ಕೊಳ್ಳುವುದು ಉತ್ತಮ.

ಡಿಸ್ ಪ್ಲೇ : ಗಾತ್ರ ಹಾಗೂ ರೆಸಲ್ಯೂಶನ್ ನೀವು ಸ್ಮಾರ್ಟ್ ಫೋನ್ ಅನ್ನು ಯಾವ ರೀತಿ ಬಳಸುತ್ತೀರಾ ಅನ್ನೋದನ್ನು ಅವಲಂಬಿಸಿರುತ್ತದೆ. ಹೆಚ್ಚಾಗಿ ವಿಡಿಯೋ ನೋಡ್ತಿದ್ರೆ, ಫೋಟೋ ಎಡಿಟ್ ಮಾಡ್ತಿದ್ರೆ, ವಿಡಿಯೋಗಳನ್ನು ಡೌನ್ ಲೋಡ್ ಮಾಡುತ್ತಿದ್ರೆ 5.5-6 ಇಂಚು ಡಿಸ್ ಪ್ಲೇ ಇರುವ ಸ್ಮಾರ್ಟ್ ಫೋನ್ ಕೊಂಡುಕೊಳ್ಳಿ. ಫುಲ್ ಎಚ್ ಡಿ ಅಥವಾ ಕ್ಯೂಎಚ್ ಡಿ ಡಿಸ್ ಪ್ಲೇ ಬೆಸ್ಟ್. 6 ಇಂಚಿಗಿಂತ ದೊಡ್ಡದಿದ್ದರೆ ಅದನ್ನು ಕ್ಯಾರಿ ಮಾಡುವುದು ಕಷ್ಟ.

ಪ್ರೊಸೆಸರ್ : ಸ್ಮಾರ್ಟ್ ಫೋನ್ ಗಳ ಪ್ರೊಸೆಸಿಂಗ್ ಪವರ್ ವಿಭಿನ್ನವಾಗಿರುತ್ತದೆ. ನೀವು ಅತಿಯಾಗಿ ಮೊಬೈಲ್ ಬಳಸುವವರಾದ್ರೆ Qualcomm Snapdragon 652 ಅಥವಾ Snapdragon 820/821 ಇರುವ ಸ್ಮಾರ್ಟ್ ಫೋನ್ ಖರೀದಿಸಿ. ಇಲ್ಲವಾದಲ್ಲಿ ಮೀಡಿಯಾಟೆಕ್ ಪ್ರೊಸೆಸರ್ ಇರುವ ಹ್ಯಾಂಡ್ ಸೆಟ್ ಸಾಕು.

ಜಾಸ್ತಿ ಮೆಗಾಪಿಕ್ಸಲ್ ಇದೆ ಎಂದಾಕ್ಷಣ ಸ್ಮಾರ್ಟ್ ಫೋನ್ ನ ಕ್ಯಾಮರಾ ಚೆನ್ನಾಗಿರುತ್ತದೆ ಎಂದರ್ಥವಲ್ಲ. ಐಎಸ್ಓ ಲೆವಲ್, ಪಿಕ್ಸಲ್ ಸೈಜ್, ಆಟೋ ಫೋಕಸ್ ಎಲ್ಲವೂ ಪ್ರಮುಖವಾಗಿರುತ್ತದೆ. ಪಿಕ್ಸಲ್ ಜಾಸ್ತಿ ಇದೆ ಎಂದರೆ ಇಮೇಜ್ ಗಾತ್ರ ದೊಡ್ಡದಿದೆ ಎಂದರ್ಥ. 12 ಅಥವಾ 16 ಮೆಗಾಪಿಕ್ಸಲ್ ಸೆನ್ಸಾರ್, f/2.0 ದ್ಯುತಿರಂಧ್ರವಿದ್ದರೆ ಸಾಕು.

ಬ್ಯಾಟರಿ : ಬ್ಯಾಟರಿ ಬಳಕೆ ಗ್ರಾಹಕರಿಂದ ಗ್ರಾಹಕರಿಗೆ ಭಿನ್ನವಾಗಿರುತ್ತದೆ, ಅವರು ಸ್ಮಾರ್ಟ್ ಫೋನನ್ನು ಯಾವ ರೀತಿ ಬಳಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಆ್ಯಪ್, ಗೇಮ್ಸ್, ವಿಡಿಯೋ ಹೀಗೆ ಅತಿಯಾಗಿ ನೀವು ಮೊಬೈಲ್ ಬಳಸುತ್ತೀರಾ ಎಂದಾದರೆ ಕನಿಷ್ಟ 3500 mAhನ ಬ್ಯಾಟರಿ ಹೊಂದಿರಬೇಕು. ಮೊಬೈಲ್ ಬಳಕೆ ಕೊಂಚ ಕಡಿಮೆ ಅಂತಾದ್ರೆ 3000 mAh ಬ್ಯಾಟರಿ ಸಾಕು.

ಓಎಸ್ ಆವೃತ್ತಿ : ಮೊಬೈಲ್ ಕೊಂಡುಕೊಳ್ಳುವಾಗ ನೀವು ಗಮನಿಸಬೇಕಾದ ಪ್ರಮುಖ ಅಂಶ ಓಎಸ್ ಆವೃತ್ತಿ. ಮೂಲ ಹಾಗೂ ಶುದ್ಧ ಆ್ಯಂಡ್ರಾಯ್ಡ್ ಅನುಭವಕ್ಕಾಗಿ ನೀವು ಮೋಟೊರೋಲಾ, ನೆಕ್ಸಸ್ ಅಥವಾ ಆ್ಯಂಡ್ರಾಯ್ಡ್ ಒನ್ ಡಿವೈಸ್ ಗಳನ್ನು ಕೊಂಡುಕೊಳ್ಳಬಹುದು. ZenUI, ExperiaUI, Samsung, TouchWiz, EMUI ಬಳಕೆದಾರ ಸ್ನೇಹಿ ಎನಿಸಿಕೊಂಡಿವೆ.

ಸ್ಟೋರೇಜ್ : ಸ್ಮಾರ್ಟ್ ಫೋನ್ ಗಳ ಸ್ಟೋರೇಜ್ ನ ಬಹುಭಾಗ ಓಎಸ್ ನಿಂದ ಪಡೆದಿದ್ದು. ಆ್ಯಪ್ ಗಳು ಮೊದಲೇ ಇನ್ ಸ್ಟಾಲ್ ಆಗಿರುತ್ತವೆ. ಹಾಗಾಗಿ 16/32 ಅಥವಾ 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಎಂದು ನಮೂದಿಸಿದ್ದರೂ ಅಷ್ಟೊಂದು ಸ್ಪೇಸ್ ಲಭ್ಯವಿರುವುದಿಲ್ಲ. ನೀವು ಜಾಸ್ತಿ ಆ್ಯಪ್ ಗಳನ್ನು ಬಳಸುತ್ತೀರಾ ಎಂದಾದಲ್ಲಿ 32 ಜಿಬಿ, 64 ಅಥವಾ 128 ಜಿಬಿ ಸ್ಟೋರೇಜ್ ಸಾಮರ್ಥ್ಯವುಳ್ಳ ಹ್ಯಾಂಡ್ ಸೆಟ್ ಆಯ್ದುಕೊಳ್ಳಿ.

ಸೆಕ್ಯೂರಿಟಿ/ಇತರ ವೈಶಿಷ್ಟ್ಯತೆಗಳು : ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲೆಲ್ಲ ಹೆಚ್ಚುವರಿ ಸೆಕ್ಯೂರಿಟಿ ಫೀಚರ್ ಗಳಿರುತ್ತವೆ, ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಐರಿಸ್ ಸೆನ್ಸಾರ್ ಗಳಿರುತ್ತವೆ. ಕೇವಲ ಲಾಕ್ ಮತ್ತು ಅನ್ ಲಾಕ್ ಅಲ್ಲ, ಫೈಲ್, ಡಾಕ್ಯುಮೆಂಟ್, ಆ್ಯಪ್ ಗಳಿಗೆ ಎಕ್ಸೆಸ್ ಪಡೆಯಲು ಪಾಸ್ ವರ್ಡ್ ಹಾಕಿಕೊಳ್ಳಬಹುದು. 5000 ಮೌಲ್ಯದ ಹ್ಯಾಂಡ್ ಸೆಟ್ ಗಳಲ್ಲೂ ಫಿಂಗರ್ ಪ್ರಿಂಟ್ ಸೆನ್ಸಾರ್ ಇರುತ್ತದೆ.

ಆಡಿಯೋ/ಸ್ಪೀಕರ್ಸ್ : ಹೆಚ್ಚಾಗಿ ವಿಡಿಯೋ ವೀಕ್ಷಿಸುವವರಿಗೆ ಮತ್ತು ವಿಡಿಯೋ ಕಾನ್ಫರೆನ್ಸ್ ನಡೆಸುವವರಿಗೆ ಸ್ಪೀಕರ್ ಗಳು ಹಾಗೂ ಆಡಿಯೋ ಗುಣಮಟ್ಟ ಚೆನ್ನಾಗಿರಬೇಕು. ಸದಾ ಮನರಂಜನೆ ಬಯಸುವವರಾಗಿದ್ದರೆ ಫ್ರಂಟ್ ಫೇಸಿಂಗ್ ಸ್ಪೀಕರ್ ಇರುವ ಮೊಬೈಲ್ ಕೊಂಡುಕೊಳ್ಳಿ. ಲ್ಯಾಂಡ್ ಸ್ಕೇಪ್ ಮೋಡ್ ನಲ್ಲಿ ಹಿಡಿದುಕೊಂಡ್ರೂ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತದೆ.

ಹೆಡ್ ಫೋನ್ ಜಾಕ್/ಯು ಎಸ್ ಬಿ ಪೋರ್ಟ್ : ಸದ್ಯ ಮೈಕ್ರೋ ಯು ಎಸ್ ಬಿ ಮತ್ತು ಯು ಎಸ್ ಬಿ ಟೈಪ್ ಸಿ ಪೋರ್ಟ್ ಗಳು ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿವೆ. ನೀವು ಯು ಎಸ್ ಬಿ ಟೈಪ್ ಸಿ ಮೊರೆ ಹೋಗೋದು ಉತ್ತಮ. ಯಾಕಂದ್ರೆ ಅದನ್ನು ಪ್ಲಗ್ ಇನ್ ಮಾಡುವುದು ಕೂಡ ಸುಲಭ. ಕೆಲವು ಸ್ಮಾರ್ಟ್ ಫೋನ್ ಗಳ ಜೊತೆ 3.5 ಎಂಎಂ ಹೆಡ್ ಫೋನ್ ಜಾಕ್ ಲಭ್ಯವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read