ಮುಂಬೈನ ಲೋಕಲ್ ರೈಲಿನ ಕೋಚ್‌ನಲ್ಲಿ ಪ್ರಯಾಣಿಕರೊಬ್ಬರು ಗುಟ್ಕಾ (ತಂಬಾಕು) ಸೇವಿಸುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸಹ ಪ್ರಯಾಣಿಕರೊಬ್ಬರು ಈ ಕೃತ್ಯವನ್ನು ಚಿತ್ರೀಕರಿಸಿದ್ದು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನವನ್ನು ಸೆಳೆದಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಧೈರ್ಯವಾಗಿ ಗುಟ್ಕಾ ಸೇವಿಸುತ್ತಿರುವುದು ಕಂಡುಬಂದಿದೆ.
ವಿಡಿಯೋವನ್ನ ಪೊಲೀಸರಿಗೆ ಟ್ಯಾಗ್ ಮಾಡಲಾಗಿದ್ದು, ಮುಂಬೈ ಲೋಕಲ್ ರೈಲಿನಲ್ಲಿ ಒಬ್ಬ ವ್ಯಕ್ತಿ ಉಪದ್ರವವನ್ನು ಸೃಷ್ಟಿಸುತ್ತಿದ್ದಾನೆ, ವಿಲಕ್ಷಣ ಸನ್ನೆಗಳನ್ನು ಮಾಡುತ್ತಿದ್ದಾನೆ. ದಯವಿಟ್ಟು ಸಹಾಯ ಮಾಡಿ. ಮಹಿಳೆ ಸಹ ಗುಟ್ಕಾ ಸೇವಿಸ್ತಿದ್ದು ಅಸಂಬದ್ಧ ವಿಷಯವನ್ನು ಮಾತನಾಡುತ್ತಿದ್ದಾಳೆ ಎಂದು ಟ್ವೀಟ್ ಮಾಡಲಾಗಿದೆ.
ಸಾರ್ವಜನಿಕ ಸಾರಿಗೆಯಾದ ರೈಲಿನಲ್ಲಿ ಮದ್ಯಪಾನ, ಧೂಮಪಾನ, ಗುಟ್ಕಾ ಸೇವನೆ ನಿಷೇಧಿಸಲಾಗಿದೆ. ವಿಡಿಯೋ ಬಗ್ಗೆ ಮುಂಬೈ ಪೊಲೀಸ್ ಪ್ರತಿಕ್ರಿಯಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
https://twitter.com/Drishti_Kumud/status/1653727772894982145?ref_src=twsrc%5Etfw%7Ctwcamp%5Etweetembed%7Ctwterm%5E1653729727784398849%7Ctwgr%5Ea2a7f52d8371284d3b8ec9f496ec40674db26b27%7Ctwcon%5Es2_&ref_url=https%3A%2F%2Fwww.freepressjournal.in%2Fmumbai%2Fon-camera-passenger-eats-gutka-in-mumbai-local-train-fellow-traveller-records-video-to-alert-police-of-nuisance