alex Certify ಪೋಷಕರೇ ಎಚ್ಚರ…! ಮಕ್ಕಳಲ್ಲೂ ಕಾಡುತ್ತಿದೆ ʼಖಿನ್ನತೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಎಚ್ಚರ…! ಮಕ್ಕಳಲ್ಲೂ ಕಾಡುತ್ತಿದೆ ʼಖಿನ್ನತೆʼ

ಮಕ್ಕಳಲ್ಲೂ ಮಾನಸಿಕ ಆರೋಗ್ಯ ಸಮಸ್ಯೆಗಳು ಸಹಜ. ಇವು ಸಾಮಾನ್ಯ ಮತ್ತು ಚಿಕಿತ್ಸೆ ನೀಡಬಹುದಾದ ತೊಂದರೆಗಳು. ತಲಾ ಐವರಲ್ಲಿ ಒಂದು ಮಗುವಿಗೆ ಮಾನಸಿಕ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರೂ ಅವರಲ್ಲಿ ಬಹುತೇಕರಿಗೆ ಚಿಕಿತ್ಸೆ ಮತ್ತು ಬೆಂಬಲ ದೊರೆಯುವುದೇ ಇಲ್ಲ.

ಮಕ್ಕಳ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಇಲ್ಲದೇ ಹೋದಲ್ಲಿ ಮನೆ, ಶಾಲೆ ಮತ್ತು ಸಮುದಾಯದಲ್ಲಿ ಮಕ್ಕಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಅವರ ಚಟುವಟಿಕೆಯನ್ನೇ ಕುಂಠಿತಗೊಳಿಸಬಹುದು. ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಮಕ್ಕಳು ಶಾಲೆಯಲ್ಲಿ ವೈಫಲ್ಯ ಅನುಭವಿಸಬಹುದು. ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಬಹುದು. ಮಾದಕ ವ್ಯಸನಕ್ಕೆ ತುತ್ತಾಗಬಹುದು. ಆತ್ಮಹತ್ಯೆಯ ಅಪಾಯವೂ ಹೆಚ್ಚಾಗಿರುತ್ತದೆ.

ಮಗುವಿನ ಭಾವನೆಗಳು ಅಥವಾ ನಡವಳಿಕೆಯಲ್ಲಿ ಸಮಸ್ಯೆಗಳಿದ್ದರೆ ಪೋಷಕರು ಮತ್ತು ಕುಟುಂಬದ ಸದಸ್ಯರು ಸಾಮಾನ್ಯವಾಗಿ ಅದನ್ನು ಗಮನಿಸುತ್ತಾರೆ. ಶಿಕ್ಷಕರು ಮತ್ತು ಇತರರ ಅವಲೋಕನಗಳು ಕೂಡ ನಿಮ್ಮ ಮಗುವಿಗೆ ಚಿಕಿತ್ಸೆ, ಬೆಂಬಲದ ಅಗತ್ಯವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂಬುದನ್ನು ಸೂಚಿಸುವ ಅಂಶಗಳು.

ಶಾಲೆಯ ಕಾರ್ಯಕ್ಷಮತೆಯಲ್ಲಿ ಕುಸಿತ

ಸತತ ಪ್ರಯತ್ನಗಳ ಹೊರತಾಗಿಯೂ ಕಳಪೆ ಅಂಕ

ನಿರಂತರ ಚಿಂತೆ ಅಥವಾ ಆತಂಕ

ಶಾಲೆಗೆ ಹೋಗಲು ಅಥವಾ ಸಾಮಾನ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪದೇ ಪದೇ ನಿರಾಕರಣೆ

ಹೈಪರ್‌ ಆಕ್ಟಿವಿಟಿ ಅಥವಾ ಚಡಪಡಿಕೆ

ನಿರಂತರ ದುಃಸ್ವಪ್ನಗಳು

ನಿರಂತರ ಅಸಹಕಾರ ಅಥವಾ ಆಕ್ರಮಣಶೀಲತೆ

ಆಗಾಗ್ಗೆ ಕೋಪ ಖಿನ್ನತೆ, ದುಃಖ ಅಥವಾ ಕಿರಿಕಿರಿ

ಮಕ್ಕಳಲ್ಲಿ ಈ ಸಮಸ್ಯೆಗಳು ಕಂಡು ಬಂದರೆ ಅದನ್ನು ಆರಂಭದಲ್ಲೇ ಗುರುತಿಸುವುದು ಬಹಳ ಮುಖ್ಯ. ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಮಕ್ಕಳು ಗುಣಮುಖರಾಗುತ್ತಾರೆ.  ಮೌಲ್ಯಮಾಪನ, ಮಕ್ಕಳು-ಮನೋವೈದ್ಯರ ಸಮಾಲೋಚನೆ, ಮಾನಸಿಕ ಪರೀಕ್ಷೆ ಮತ್ತು ರೋಗಲಕ್ಷಣಗಳನ್ನು ಉಂಟುಮಾಡುವ ಯಾವುದೇ ದೈಹಿಕ ಸ್ಥಿತಿಯನ್ನು ತಳ್ಳಿಹಾಕಲು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿರಬಹುದು.

ಕಲಿಕೆಯಲ್ಲಿ ಅಸಮರ್ಥತೆ ಅಥವಾ ಬೆಳವಣಿಗೆಯ ವಿಳಂಬಗಳಿಂದ ಸಂಭವನೀಯ ಮಾನಸಿಕ ಆರೋಗ್ಯ ಪರಿಸ್ಥಿತಿಗಳನ್ನು ಪ್ರತ್ಯೇಕಿಸಲು ಮಕ್ಕಳನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕು. ನಿಮ್ಮ ಮಗುವಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇರುವುದು ಪತ್ತೆಯಾದರೆ, ಸಮಗ್ರ ಚಿಕಿತ್ಸೆ ಅತ್ಯಗತ್ಯ. ಕೆಲವು ಸಂದರ್ಭಗಳಲ್ಲಿ ಔಷಧಿಗಳನ್ನು ನೀಡಬಹುದು. ಅಥವಾ ಇಡೀ ಕುಟುಂಬದವರಿಗೇ ಪ್ರತ್ಯೇಕ ಸಲಹೆ ಸೂಚನೆಗಳನ್ನು ಅದು ಒಳಗೊಂಡಿರಬಹುದು.

ಹೆಚ್ಚಿನ ಮಕ್ಕಳ ಮಾನಸಿಕ ಖಿನ್ನತೆಗೆ ಅವರ ದೈಹಿಕ ನ್ಯೂನತೆ ಕಾರಣ ಎಂದು ಹೇಳಲಾಗುತ್ತದೆ. 5 ವರ್ಷದೊಳಗಿನ ಪ್ರತಿ 50 ಮಕ್ಕಳಲ್ಲಿ ಒಬ್ಬರು  ಕೆಲವು ಬೆಳವಣಿಗೆಯ ಅಸಾಮರ್ಥ್ಯದಿಂದಾಗಿ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...