ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್ ಆಗಿದ್ದು, ಜನರು ವ್ಹಾರೆವ್ಹಾ ಎನ್ನುತ್ತಿದ್ದಾರೆ.
ವೈರಲ್ ವಿಡಿಯೋದಲ್ಲಿ, ಪಾಕಿಸ್ತಾನಿ ಹುಡುಗಿಯೊಬ್ಬಳು ತನ್ನ ಸಹೋದರಿಯ ಮದುವೆಯಲ್ಲಿ ಅಂಗ್ ಲಗಾ ದೆಗೆ ನೃತ್ಯ ಮಾಡುವುದನ್ನು ಕಾಣಬಹುದು. ಈ ಅಭಿನಯಕ್ಕೆ ಜನರು ಫಿದಾ ಆಗಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ನಟಾಲಿಯಾ ಕಾಲಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಕಿರು ವಿಡಿಯೋದಲ್ಲಿ, ನಟಾಲಿಯಾ ಅವರ ತಂಗಿ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾದಿಂದ ಜನಪ್ರಿಯ ಟ್ರ್ಯಾಕ್‌ಗೆ ಪ್ರದರ್ಶನ ನೀಡುವುದನ್ನು ಕಾಣಬಹುದು. ಈಕೆ ಸುಂದರವಾದ ಲೆಹೆಂಗಾವನ್ನು ಧರಿಸಿ ಅಷ್ಟೇ ಸುಂದರವಾಗಿ ನೃತ್ಯ ಮಾಡಿ ಎಲ್ಲರನ್ನೂ ಮೋಡಿ ಮಾಡಿದ್ದಾಳೆ. ಜನರು ಈಕೆಯ ನೃತ್ಯಕ್ಕೆ ಮನ ಸೋತಿದ್ದು, ಅದ್ಭುತ ನೃತ್ಯ ಎಂದು ಶ್ಲಾಘಿಸುತ್ತಿದ್ದಾರೆ.
https://www.youtube.com/watch?v=galC3yCPLLY&feature=youtu.be