ಕೇವಲ ’ಬಿಳಿ’ಯ ಅಭ್ಯರ್ಥಿಗಳು ಮಾತ್ರವೇ ಅರ್ಜಿ ಹಾಕಬಹುದು ಎಂದು ಪ್ರಕಟಿಸಲಾದ ಉದ್ಯೋಗದ ಜಾಹೀರಾತೊಂದರಿಂದ ಅಮೆರಿಕ ಮೂಲದ ಕಂಪನಿಯೊಂದು ಭಾರೀ ವಿವಾದಕ್ಕೆ ಸಿಲುಕಿದೆ.
“ಟೆಕ್ಸಸ್‌ನ ಡಲ್ಲಾಸ್‌ನಿಂದ 60 ಮೈಲಿ ಅಂತರದಲ್ಲಿರುವ, ಅಮೆರಿಕದಲ್ಲಿ ಹುಟ್ಟಿದ ಪ್ರಜೆಗಳಿಗೆ (ಬಿಳಿಯ) ಮಾತ್ರ,” ಎಂದು ಉದ್ಯೋಗದ ವಿವರಗಳಲ್ಲಿ ತಿಳಿಸಲಾಗಿರುವ ಈ ಜಾಹೀರಾತು ನೆಟ್ಟಿಗರಿಂದ ಭಾರೀ ಟೀಕೆಗೆ ಗ್ರಾಸವಾಗಿದೆ.
ವರ್ಜೀನಿಯಾ ಮೂಲದ ಆರ್ಥರ್ ಗ್ರಾಂಡ್ ಟೆಕ್ನಾಲಜೀಸ್ ಈ ಜಾಹೀರಾತು ಪ್ರಕಟಿಸಿದೆ. ಟ್ವಿಟರ್ ಹಾಗೂ ರೆಡ್ಡಿಟ್‌ಗಳಲ್ಲಿ ಈ ಕೆಲಸದ ಜಾಹೀರಾತು ಸಾಕಷ್ಟು ಚರ್ಚೆಗೆ ಒಳಗಾಗಿದೆ.
“ಹಾಯ್ ವಾರನ್ ಬಫೇಟ್ ! ಬರ್ಕ್‌ಶೈರ್ ಹಾಥವೇ ವೆಂಡರ್‌ಗಳ ಹಾಗೆ ಕಾಣುತ್ತಾರೆ……. ಆರ್ಥರ್ ಗ್ರಾಂಡ್ ಟೆಕ್ನಾಲಜೀಸ್ ಇಂಕ್…… ಇವರ ಹೈರಿಂಗ್ ಪ್ರಕ್ರಿಯೆಯಲ್ಲಿ ಸಮಸ್ಯೆ ಇರುವಂತೆ ಕಾಣುತ್ತದೆ. ವರ್ಣ, ರಾಷ್ಟ್ರೀಯತೆ ಆಧಾರದ ಮೇಲೆ ಮಾಡುವ ತಾರತಮ್ಯ ಕಂಪನಿಗೆ ಕೆಟ್ಟ ಹೆಸರು ತರುವುದಲ್ಲದೇ, ಸ್ಪರ್ಧಾತ್ಮಕತೆಯನ್ನು ಕುಗ್ಗಿಸುತ್ತದೆ,” ಎಂದು ಟಿಕೆ ಫಿಂಚ್ ಹೆಸರಿನ ಹ್ಯಾಂಡಲ್ ಒಂದು ಈ ವಿಚಾರದಲ್ಲಿ ರಚನಾತ್ಮಕವಾದ ಟೀಕೆ ಮಾಡಿದೆ.
https://twitter.com/TK_Finch/status/1643403774172749824?ref_src=twsrc%5Etfw%7Ctwcamp%5Etweetembed%7Ctwterm%5E1643403774172749824%7Ctwgr%5E96ecb7932ca0e242c3bbc2897af23488b47979fb%7Ctwcon%5Es1_&ref_url=https%3A%2F%2Fwww.news18.com%2Fworld%2Fonly-white-candidates-job-advertisement-sparks-outrage-on-internet-7484665.html
https://twitter.com/TK_Finch/status/1643403774172749824?ref_src=twsrc%5Etfw%7Ctwcamp%5Etweetembed%7Ctwterm%5E1643523747234852864%7Ctwgr%5E96ecb7932ca0e242c3bbc2897af23488b47979fb%7Ctwcon%5Es2_&ref_url=https%3A%2F%2Fwww.news18.com%2Fworld%2Fonly-white-candidates-job-advertisement-sparks-outrage-on-internet-7484665.html
https://twitter.com/TK_Finch/status/1643403774172749824?ref_src=twsrc%5Etfw%7Ctwcamp%5Etweetembed%7Ctwterm%5E1643453885829509120%7Ctwgr%5E96ecb7932ca0e242c3bbc2897af23488b47979fb%7Ctwcon%5Es2_&ref_url=https%3A%2F%2Fwww.news18.com%2Fworld%2Fonly-white-candidates-job-advertisement-sparks-outrage-on-internet-7484665.html