
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ಡಿಸೆಂಬರ್ 23 ರಿಂದ ವೈಕುಂಠ ಏಕಾದಶಿ ಉತ್ಸವ ಆರಂಭವಾಗಲಿದೆ. ಜನವರಿ ಒಂದರವರೆಗೆ ವೈಕುಂಠ ದ್ವಾರದರ್ಶನಂ ಉತ್ಸವ ಆಯೋಜಿಸಲಾಗಿದೆ.
ಲಕ್ಷಾಂತರ ಭಕ್ತರಿಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲು ಟಿಟಿಡಿ 300 ರೂಪಾಯಿ ಮೊತ್ತದ ಟಿಕೆಟ್ ಗಳನ್ನು ನವೆಂಬರ್ 10 ರಂದು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಿದೆ. 10 ದಿನಗಳ ಅವಧಿಗೆ ವೈಕುಂಠ ದ್ವಾರದರ್ಶನದ 2.25 ಲಕ್ಷ ಟಿಕೆಟ್ ಗಳನ್ನು ಬಿಡುಗಡೆ ಮಾಡಲಾಗುವುದು. 20,000 ಶ್ರೀವಾಣಿ ಟಿಕೆಟ್ ಗಳನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಶ್ರೀವಾಣಿ ಟಿಕೆಟ್ ಹೊಂದಿದವರಿಗೆ ವೈಕುಂಠ ದ್ವಾರದ ಅವಧಿಯಲ್ಲಿ ಮಾತ್ರ 300 ರೂ. ದರ್ಶನ ಕಲ್ಪಿಸಲಾಗುವುದು. ಸಾಮಾನ್ಯ ಯಾತ್ರಾರ್ಥಿಗಳ ಅನುಕೂಲಕ್ಕೆ ತಿರುಪತಿಯ 9 ಸ್ಥಳಗಳ 100 ಕೌಂಟರ್ ಗಳಲ್ಲಿ ಈ ದಿನಗಳಂದು 4.25 ಲಕ್ಷ ಟೋಕನ್ ಗಳನ್ನು ವಿತರಿಸಲಾಗುವುದು.