ಒಂದಲ್ಲ ಒಂದು ದಿನ ಅಮೆರಿಕವೂ ನಾಶವಾಗುತ್ತದೆ ಎಂದು ಇಸ್ರೇಲ್-ಹಮಾಸ್ ಯುದ್ಧದ ನಡುವೆ ಹಮಾಸ್ ನ ಹಿರಿಯ ಅಧಿಕಾರಿ ಅಲಿ ಬರಾಕಾ ಎಚ್ಚರಿಕೆ ನೀಡಿದ್ದಾರೆ.
ನವೆಂಬರ್ 2 ರಂದು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅಲಿ ಬರಾಕಾ ಈ ಹೇಳಿಕೆ ನೀಡಿದ್ದಾರೆ.
ಅಮೆರಿಕದ ಎಲ್ಲಾ ಶತ್ರುಗಳು ಒಟ್ಟಿಗೆ ಯುದ್ಧಕ್ಕೆ ಸೇರುವ ದಿನ ಬರಬಹುದು ಮತ್ತು ಅಮೆರಿಕವನ್ನು ಗತಕಾಲದ ವಿಷಯವಾಗಿ ಪರಿವರ್ತಿಸಬಹುದು” ಎಂದು ಹಮಾಸ್ ಅಧಿಕಾರಿ ಎಚ್ಚರಿಸಿದ್ದಾರೆ. ನಮಗೆ ತಿಳಿದಿರುವಂತೆ ವಿಶ್ವದಲ್ಲಿ ಅಮೆರಿಕವನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವುದು ಉತ್ತರ ಕೊರಿಯಾಕ್ಕೆ. ಶೀಘ್ರದಲ್ಲೇ ಇಸ್ರೇಲ್ ಹಮಾಸ್ ಯುದ್ಧದ ನಡುವೆ ಉತ್ತರ ಕೊರಿಯಾ ಮಧ್ಯಪ್ರವೇಶಿಸುವ ದಿನ ಬರಬಹುದು.ಅಮೆರಿಕ ಶಕ್ತಿಶಾಲಿಯಾಗಿ ಉಳಿಯುವುದಿಲ್ಲ” ಎಂದು ಅವರು ಹೇಳಿದರು.
ಯುಎಸ್ ಮೇಲೆ ದಾಳಿ ಮಾಡುವ ಉತ್ತರ ಕೊರಿಯಾದ ಸಾಮರ್ಥ್ಯವನ್ನು ಅಲಿ ಬರಾಕಾ ಶ್ಲಾಘಿಸಿದರು.ಉತ್ತರ ಕೊರಿಯಾದ ನಾಯಕ, ಬಹುಶಃ ಯುನೈಟೆಡ್ ಸ್ಟೇಟ್ಸ್ ಅನ್ನು ಹೊಡೆಯುವ ಸಾಮರ್ಥ್ಯ ಹೊಂದಿರುವ ವಿಶ್ವದ ಏಕೈಕ ನಾಯಕ. ಅವರು ಒಬ್ಬರೇ” ಎಂದು ಅಲಿ ಬರಾಕಾ ಹೇಳಿದರು.ಹಮಾಸ್ ಬಂಡುಕೋರರ ವಿರುದ್ಧ ಸಮರ ನಡೆಸುತ್ತಿರುವ ಇಸ್ರೇಲ್ ಗೆ ಬೆಂಬಲವಾಗಿ ನಿಂತಿರುವ ಅಮೆರಿಕ ಸರ್ಕಾರ ಈಗ 14.5 ಬಿಲಿಯನ್ ಅಮೆರಿಕನ್ ಡಾಲರ್ (1.19 ಲಕ್ಷ ಕೋಟಿ ರೂ.) ನೆರವು ಘೋಷಣೆ ಮಾಡಿದೆ.