ಕೇಂದ್ರದಲ್ಲಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ರಚನೆಯಾಗಿದೆ. ನರೇಂದ್ರ ಮೋದಿ ಮತ್ತು ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಯಾವುದೇ ಸರ್ಕಾರದಲ್ಲಿ ಮಂತ್ರಿಗಳ ಸಂಖ್ಯೆ ಕೂಡ ನಿಯಮಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ನಿಯಮಗಳ ಪ್ರಕಾರ ಸಂಪುಟದಲ್ಲಿ ಸಚಿವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಹೆಚ್ಚಾಗುವಂತಿಲ್ಲ.ಮಂತ್ರಿಗಳನ್ನು ಮೂರು ರೀತಿಯಲ್ಲಿ ನೇಮಕ ಮಾಡಲಾಗುತ್ತದೆ. ಕ್ಯಾಬಿನೆಟ್ ಸಚಿವರು, ರಾಜ್ಯ ಸಚಿವರು ಮತ್ತು ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ).
ಸಂಪುಟದಲ್ಲಿ ಇರಬಹುದಾದ ಗರಿಷ್ಠ ಮಂತ್ರಿಗಳ ಸಂಖ್ಯೆ ಎಷ್ಟು?
ಲೋಕಸಭೆ ಸ್ಥಾನಗಳಿಗೆ ಅನುಗುಣವಾಗಿ ಸಚಿವರ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ. 18ನೇ ಲೋಕಸಭೆಗೆ 543 ಸ್ಥಾನಗಳಿಗೆ ಚುನಾವಣೆ ನಡೆದಿದೆ. ನಿಯಮಗಳ ಪ್ರಕಾರ ಚುನಾಯಿತ ಸದಸ್ಯರ ಸಂಖ್ಯೆಯ ಶೇಕಡಾ 15 ರಷ್ಟು ಸಚಿವರ ಬಲ ಮಾತ್ರ ಇರಬಹುದು. ಇದರ ಪ್ರಕಾರ ಮೋದಿ ಸರ್ಕಾರದಲ್ಲಿ ಗರಿಷ್ಠ ಮಂತ್ರಿಗಳ ಸಂಖ್ಯೆ 81-82ರಷ್ಟಿರಬಹುದು.
ಭಾರತದಲ್ಲಿ ಸಚಿವ ಸಂಪುಟ ರಚನೆ
ಭಾರತೀಯ ಸಂವಿಧಾನದ 74, 75 ಮತ್ತು 77ನೇ ವಿಧಿಗಳಲ್ಲಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ರಚನೆಗೆ ಅವಕಾಶವಿದೆ. ಆರ್ಟಿಕಲ್ 74ರ ಪ್ರಕಾರ ರಾಷ್ಟ್ರಪತಿಗಳ ಸಲಹೆಯ ಮೇರೆಗೆ ಪ್ರಧಾನಿ, ಮಂತ್ರಿಮಂಡಲವನ್ನು ಅಂತಿಮಗೊಳಿಸುತ್ತಾರೆ. ಸಂಪುಟದ ಮುಖ್ಯಸ್ಥರಾಗಿ ಯಾವ ವಿಜೇತ ಅಭ್ಯರ್ಥಿಯನ್ನು ಮಂತ್ರಿಯನ್ನಾಗಿ ಮಾಡಬೇಕು ಎಂದು ಪ್ರಧಾನಿ ರಾಷ್ಟ್ರಪತಿಗಳಿಗೆ ಸಲಹೆ ನೀಡುತ್ತಾರೆ. ಪ್ರಧಾನ ಮಂತ್ರಿ ಮತ್ತು ಮಂತ್ರಿಗಳು ಅಧಿಕಾರ ಸ್ವೀಕರಿಸುವ ಮೊದಲು ರಾಷ್ಟ್ರಪತಿಯವರಿಂದ ಪ್ರಮಾಣ ವಚನ ಸ್ವೀಕರಿಸುತ್ತಾರೆ.
ಕ್ಯಾಬಿನೆಟ್ ಸದಸ್ಯರು
ಪ್ರಧಾನ ಮಂತ್ರಿಯ ಹೊರತಾಗಿ, ಕ್ಯಾಬಿನೆಟ್ ಮಂತ್ರಿಗಳು, ರಾಜ್ಯ ಸಚಿವರು ಮತ್ತು ರಾಜ್ಯ ಮಂತ್ರಿಗಳು (ಸ್ವತಂತ್ರ ಉಸ್ತುವಾರಿ) ಸೇರಿದಂತೆ ವಿವಿಧ ಶ್ರೇಣಿಯ ಮಂತ್ರಿಗಳನ್ನು ಒಳಗೊಂಡಿದೆ.
ಸಂಪುಟ ಸಚಿವರು: ಇವರು ಕ್ಯಾಬಿನೆಟ್‌ನ ಅತ್ಯಂತ ಹಿರಿಯ ಸದಸ್ಯರು ಮತ್ತು ಪ್ರಮುಖ ಸಚಿವಾಲಯಗಳ ಉಸ್ತುವಾರಿಯನ್ನು ಹೊಂದಿರುತ್ತಾರೆ.
ರಾಜ್ಯ ಮಂತ್ರಿಗಳು: ಅವರು ಕ್ಯಾಬಿನೆಟ್ ಮಂತ್ರಿಗಳಿಗೆ ಸಹಾಯಕರು ಮತ್ತು ಕಡಿಮೆ ಪ್ರಾಮುಖ್ಯತೆಯ ಸಚಿವಾಲಯಗಳ ಉಸ್ತುವಾರಿಯನ್ನು ಹೊಂದಿರುತ್ತಾರೆ.
ರಾಜ್ಯ ಮಂತ್ರಿಗಳು (ಸ್ವತಂತ್ರ ಉಸ್ತುವಾರಿ): ಇವರು ರಾಜ್ಯದ ಮಂತ್ರಿಗಳನ್ನು ಹೋಲುತ್ತಾರೆ. ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮತ್ತು ನೇರವಾಗಿ ಪ್ರಧಾನ ಮಂತ್ರಿಗೆ ವರದಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
ಕ್ಯಾಬಿನೆಟ್ ಜವಾಬ್ಧಾರಿಗಳು
ಸಂಪುಟವು ಲೋಕಸಭೆಗೆ ಸಾಮೂಹಿಕ ಹೊಣೆಗಾರಿಕೆಯನ್ನು ಹೊಂದಿದೆ. ಇದು ಸರ್ಕಾರದ ನೀತಿಗಳನ್ನು ರೂಪಿಸುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ. ಕಾನೂನುಗಳನ್ನು ಪ್ರಸ್ತಾಪಿಸುತ್ತದೆ ಮತ್ತು ಸಂಸತ್ತು ಅಂಗೀಕರಿಸಿದ ಕಾನೂನುಗಳನ್ನು ಜಾರಿಗೊಳಿಸುತ್ತದೆ. ಇದು ದೇಶದ ಆಡಳಿತವನ್ನು ನಿರ್ವಹಿಸುತ್ತದೆ ಮತ್ತು ರಾಷ್ಟ್ರಪತಿಗಳಿಗೆ ಸಲಹೆ ನೀಡುತ್ತದೆ.
ಕ್ಯಾಬಿನೆಟ್ ಅಧಿಕಾರಾವಧಿ
ಸಂಪುಟದ ಅಧಿಕಾರಾವಧಿಯು ಸಾಮಾನ್ಯವಾಗಿ ಲೋಕಸಭೆಯ ಐದು ವರ್ಷಗಳ ಅವಧಿಗೆ ಸಮಾನವಾಗಿರುತ್ತದೆ. ಲೋಕಸಭೆ ವಿಸರ್ಜನೆಯಾದರೆ ಸಚಿವ ಸಂಪುಟವೂ ವಿಸರ್ಜನೆಯಾಗುತ್ತದೆ. ಲೋಕಸಭೆಯಲ್ಲಿ ಬಹುಮತ ಕಾಯ್ದುಕೊಳ್ಳಲು ವಿಫಲವಾದಲ್ಲಿ ಪ್ರಧಾನಿಯನ್ನು ರಾಷ್ಟ್ರಪತಿಗಳು ಕೂಡ ವಜಾ ಮಾಡಬಹುದು.