ಆಲಿವ್ ಆಯಿಲ್ ಚರ್ಮದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಇದರಲ್ಲಿ ಸತು, ಗಂಧಕ, ವಿಟಮಿನ್ ಬಿ, ಕ್ಯಾಲ್ಸಿಯಂ, ಐರನ್ ನಂತಹ ಪೋಷಕಾಂಶ ಹೊಂದಿದೆ. ಇದನ್ನು ಮಕ್ಕಳಿಗೆ ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು.
*ಆಲಿವ್ ಆಯಿಲ್ ನಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಇರುವುದರಿಂದ ಇದನ್ನು ಮಕ್ಕಳ ಕೂದಲಿಗೆ ಮತ್ತು ಚರ್ಮಕ್ಕೆ ಹಚ್ಚಿದರೆ ಕೂದಲು ಮತ್ತು ಚರ್ಮ ಆರೋಗ್ಯವಾಗಿರುತ್ತದೆ. ತಲೆಹೊಟ್ಟನ್ನು ನಿವಾರಿಸುತ್ತದೆ.
*ಮಕ್ಕಳ ತೂಕ ಹೆಚ್ಚಿಸಲು ಇದನ್ನು ಅವರ ಆಹಾರದಲ್ಲಿ ಸೇರಿಸಬಹುದು. ಹಾಲು, ನೀರು ಮತ್ತು ಜ್ಯೂಸ್ ಗಳಲ್ಲಿ ಆಲಿವ್ ಆಯಿಲ್ ಮಿಕ್ಸ್ ಮಾಡಿ ಕೊಡಿ. ಆದರೆ ಖಾಲಿ ಹೊಟ್ಟೆಯಲ್ಲಿ ನೀಡಬೇಡಿ.
*ಮಕ್ಕಳು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ 1 ಚಮಚ ಆಲಿವ್ ಆಯಿಲ್ ನ್ನು ಕುಡಿಸಿ.