ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಕನ್ವರ್ಟಿಬಲ್ ಕಾರಿನಲ್ಲಿ ಡ್ಯಾನ್ಸ್ ಮಾಡುತ್ತಿರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ಕಾಣಿಸಿಕೊಂಡಿದೆ. ವೈರಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಪಿಕ್ 69 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ . ಈ ವಿಡಿಯೋ ಇದುವರೆಗೆ ಸುಮಾರು 60 ಲಕ್ಷ ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ.
ಜನನಿಬಿಡ ರಸ್ತೆಯಲ್ಲಿ ಚಲಿಸುವಾಗ ಯುವತಿ ಕಾರಿನಲ್ಲಿ ನೃತ್ಯ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್ ನ ಕಾಮೆಂಟ್ ವಿಭಾಗದಲ್ಲಿ ವಿಭಿನ್ನವಾದ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಯುವತಿಯ ವರ್ತನೆಯನ್ನು ನಾಚಿಕೆಗೇಡಿನ ಕೃತ್ಯ ಎಂದು ಟೀಕಿಸಿದ್ದಾರೆ.
ಮತ್ತೆ ಕೆಲವರು ಯುವತಿಯನ್ನು ಬೆಂಬಲಿಸುತ್ತಾ ಆಕೆ ರಸ್ತೆ ಸಂಚಾರಕ್ಕೆ ತೊಂದರೆ ಮಾಡಿಲ್ಲ, ಯಾರನ್ನೂ ಸಾರ್ವಜನಿಕವಾಗಿ ನಿಂದಿಸುತ್ತಿಲ್ಲ. ಮತ್ಯಾವ ಕಾರಣಕ್ಕೆ ಅವಳನ್ನು ನೀವು ಕೆಟ್ಟದಾಗಿ ಟೀಕಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಯುವತಿಯ ನಡೆ ಪರ- ವಿರೋಧದ ಚರ್ಚೆಗೆ ಕಾರಣವಾಗಿದೆ.