alex Certify ಮೊದಲ ಪ್ರೀತಿಯ ಕುರಿತು ಆಪ್ ನಾಯಕ ರಾಘವ್ ಚಡ್ಡಾ ಜೊತೆಗೆ ತಮಾಷೆಯಾಡಿದ ವೆಂಕಯ್ಯ ನಾಯ್ಡು; ಹಳೆಯ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಪ್ರೀತಿಯ ಕುರಿತು ಆಪ್ ನಾಯಕ ರಾಘವ್ ಚಡ್ಡಾ ಜೊತೆಗೆ ತಮಾಷೆಯಾಡಿದ ವೆಂಕಯ್ಯ ನಾಯ್ಡು; ಹಳೆಯ ವಿಡಿಯೋ ವೈರಲ್

ವೆಂಕಯ್ಯ ನಾಯ್ಡು ಅವರು ಸಂಸತ್ ಅಧಿವೇಶನದಲ್ಲಿ ಎಎಪಿ ನಾಯಕನನ್ನು ತಮಾಷೆ ಮಾಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಬಾಲಿವುಡ್ ನಟಿ ಪರಿಣಿತಿ ಚೋಪ್ರಾರೊಂದಿಗೆ ಇತ್ತೀಚೆಗೆ ರಾಘವ್ ಚಡ್ಡಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವೇಳೆ ಹಳೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ, ಭಾರತದ ಮಾಜಿ ಉಪರಾಷ್ಟ್ರಪತಿ ಆಪ್ ನಾಯಕ ರಾಘವ್ ರನ್ನು ಮೊದಲ ಪ್ರೀತಿಯ ಕುರಿತು ಕೀಟಲೆ ಮಾಡುವುದನ್ನು ನೋಡಬಹುದು.

ಭಾರತದ ಮಾಜಿ ಉಪರಾಷ್ಟ್ರಪತಿ ಇದ್ದಕ್ಕಿದ್ದಂತೆ ಪ್ರೀತಿ ಮತ್ತು ಸಂಬಂಧಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ರು. ರಾಘವ್, ನನಗನ್ನಿಸಿದ್ದು ಪ್ರೀತಿ ಅಂದ್ರೆ ಅದೇ ಅಲ್ವಾ? ಒಮ್ಮೆ, ಎರಡನೇ ಬಾರಿ, ಮತ್ತೊಮ್ಮೆ ಅದು ಸಂಭವಿಸುತ್ತದೆಯೇ? ಇಲ್ಲವೇ? ಎಂದು ನಾಯ್ಡು ರಾಘವ್‌ಗೆ ಹೇಳಿದರು. ನಾನು ಇಷ್ಟು ಅನುಭವಿ ಅಲ್ಲ. ಜೀವನದಲ್ಲಿ ಇನ್ನೂ ಹೆಚ್ಚಿನದನ್ನು ಅನುಭವಿಸಿಲ್ಲ ಎಂದು ರಾಘವ್ ಹೇಳಿದ್ರು. ಅದಕ್ಕೆ ನಾಯ್ಡು ಅವರು, ಮೊದಲ ಪ್ರೀತಿ ಬಹಳ ಒಳ್ಳೆಯದು, ಅದು ಯಾವಾಗಲೂ ಜೀವನದ ಜೊತೆಗೆ ಇರಬೇಕು ಎಂದು ಹೇಳಿದ್ರು. ಈ ಮಾತುಗಳು ಸಂಸತ್ ನಲ್ಲಿ ನಗೆಗಡಲಿನಲ್ಲಿ ತೇಲುವಂತೆ ಮಾಡಿತು.

ಅಂದಹಾಗೆ, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಅವರ ನಿಶ್ಚಿತಾರ್ಥ ಸಮಾರಂಭದಲ್ಲಿ ಪರಿಣಿತಿ ಮತ್ತು ರಾಘವ್ ಅವರ ಕುಟುಂಬಗಳು ಮತ್ತು ಅವರ ಆಪ್ತರು ಭಾಗವಹಿಸಿದ್ದರು.

https://www.youtube.com/shorts/XIL11H32stc

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...