ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ….! ತೂಕ ಇಳಿಸಲು ಇಲ್ಲಿದೆ ಉಪಾಯ

ಸ್ಥೂಲಕಾಯದ ಬಗ್ಗೆ ಚರ್ಚೆ ಆದಾಗಲೆಲ್ಲ ನೆನಪಿಗೆ ಬರುವುದು ಯುವಕರು ಮತ್ತು ಮಧ್ಯವಯಸ್ಕರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತೂಕ ಹೆಚ್ಚುತ್ತಿರುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ.

ಬೊಜ್ಜಿನ ಸಮಸ್ಯೆಯಿಂದಾಗಿ ಮಕ್ಕಳಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಇದರಿಂದ ಮಕ್ಕಳು ಅನೇಕ ರೋಗಗಳ ಅಪಾಯಕ್ಕೆ ಒಳಗಾಗುತ್ತಾರೆ. ಸಮಸ್ಯೆ ವಿಪರೀತಕ್ಕೆ ಹೋಗುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ್ರೆ ಮಕ್ಕಳಲ್ಲಿ ಈ ಬೊಜ್ಜನ್ನು ನಿವಾರಿಸಬಹುದು.

ಮಕ್ಕಳಿಗೆ ಕನಿಷ್ಠ 10 ರಿಂದ 12 ಗ್ಲಾಸ್ ನೀರು ಕುಡಿಯಲು ಪ್ರೇರೇಪಿಸಿ. ದೇಹದಲ್ಲಿ ನೀರಿನ ಕೊರತೆಯಿದ್ದರೆ ಆರೋಗ್ಯಕ್ಕೆ ಏನು ಹಾನಿಯಾಗಬಹುದು ಎಂಬುದನ್ನು ಮನಮುಟ್ಟುವಂತೆ ವಿವರಿಸಿ. ನೀರು ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುವುದಲ್ಲದೆ ತೂಕವನ್ನು ಸಹ ನಿಯಂತ್ರಣದಲ್ಲಿಡುತ್ತದೆ.

ದೈಹಿಕ ಚಟುವಟಿಕೆಗಳನ್ನು ಮಾಡುವುದು ಸಹ ಅಗತ್ಯವಾಗಿದೆ. ಪಾಲಕರು ಮಕ್ಕಳನ್ನು ನೃತ್ಯ ಅಥವಾ ಕರಾಟೆ ಇತ್ಯಾದಿ ಕ್ಲಾಸ್‌ ಗಳಿಗೆ ಸೇರಿಸಬಹುದು. ಇದರಿಂದ ಅವರ ದೇಹ ಸಕ್ರಿಯವಾಗಿರುತ್ತದೆ. ದೈಹಿಕ ಸದೃಢತೆ ಮಾತ್ರವಲ್ಲದೆ ಮಕ್ಕಳ ಕೌಶಲಾಭಿವೃದ್ಧಿಯೂ ಸಾಧ್ಯ.

ಸಮಯಕ್ಕೆ ಸರಿಯಾಗಿ ನಿದ್ರೆ ಮಾಡದಿರುವುದು ಮಕ್ಕಳ ತೂಕ ಹೆಚ್ಚಾಗಲು ಒಂದು ಪ್ರಮುಖ ಕಾರಣ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಫೋನ್ ಅಥವಾ ಲ್ಯಾಪ್‌ಟಾಪ್‌ ಮುಂದೆ ಬಹಳ ಸಮಯ ಕುಳಿತುಕೊಳ್ಳುತ್ತಾರೆ. ಇದರಿಂದಾಗಿ ಅವರಿಗೆ ನಿದ್ದೆಯ ಕೊರತೆಯಾಗುತ್ತದೆ. ನಿದ್ದೆ ಸರಿಯಾಗಿ ಮಾಡದ ಕಾರಣ ಹಸಿವಿನ ಮೇಲೂ ಪರಿಣಾಮ ಉಂಟಾಗುತ್ತದೆ. ಇದು ಕೂಡ ಸ್ಥೂಲಕಾಯತೆಗೆ ಕಾರಣವಾಗಬಲ್ಲದು. ಹಾಗಾಗಿ ಮಕ್ಕಳನ್ನು ಬೇಗ ಮಲಗಿಸುವುದು ಒಳಿತು.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read